ಸಮಗ್ರ ನ್ಯೂಸ್: ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ಕುಡಿಯುವುದರಿಂದ ರೋಗಗಳು ಹರಡುತ್ತವೆ. ತೀರ್ಥ ಕೊಡುವವರು ಶುದ್ಧವಾಗಿ ಕೈ ತೊಳೆದಿರುವುದಿಲ್ಲ. ಇದರಿಂದ ಎಷ್ಟೋ ಜನರು ವಾಂತಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಲ್ಲರ ಮನೆಯಲ್ಲಿಯೂ ನೀರು ಇದೆ. ಹೀಗಿದ್ದಾಗ ತೀರ್ಥ ಯಾಕೆ ಕುಡಿಯಬೇಕು. ಹೆಣ ಸುಟ್ಟು ಗಂಗಾ ನದಿಗೆ ಎಸೆಯುತ್ತಾರೆ. ಇದರಿಂದ ನದಿಯಲ್ಲಿ ಹೆಣಗಳು ತೇಲಿ ಬರುತ್ತವೆ. ಇಂತಹ ಜಲವನ್ನು ಗಂಗಾಜಲವೆಂದು ಯಾಕೆ ಕುಡಿಯಬೇಕು ಎಂದು ಲಲಿತಾ ನಾಯಕ್ ಪ್ರಶ್ನಿಸಿದ್ದಾರೆ.
ಕಾಣದ ದೇವರಿಗೆ ಪೂಜೆ ಮಾಡುವುದೆಂದು ಹೂವು, ಬಟ್ಟೆ ಯಾಕೆ ಹಾಕಬೇಕು. ದೇವಸ್ಥಾನದಲ್ಲಿ ಯಾರೋ ಹೇಳಿದರೆಂದು ದುಡ್ಡು ಹಾಕುತ್ತಾರೆ. ಜನರು ಅನಗತ್ಯವಾಗಿ ಹಣ ಪೋಲು ಮಾಡಬಾರದು. ಆದರೆ ಈಗ ಜನರಿಗೂ ತಿಳುವಳಿಕೆ ಬಂದಿದೆ. ಜನರು ದೇವಸ್ಥಾನದಲ್ಲಿ ದುಡ್ಡು ಹಾಕುತ್ತಿಲ್ಲ ಎಂದು ಹೇಳಿದರು.
ಪೂಜೆ ಎಂದರೆ ದೇಹ, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು. ಇದನ್ನು ಸರ್ಕಾರಗಳು, ಸಂಘಸಂಸ್ಥೆಗಳು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ವೈಜ್ಞಾನಿಕ ಸತ್ಯ ಏನಿವೆಯೋ ಅದನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
This lady is attention seeker. She is just barking to get the attention
ಆವತ್ತು ಇವಳ ಮಗನೇ ಅಲ್ವಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜೀ ಪ್ರತಿಮೆಗೆ ಮದ್ಯದ ಅಭಿಷೇಕ ಮಾಡಿದ್ದು.
ಆಹಾ…,
ಇಂಥಾ ಸಂಸ್ಕಾರ ಇಟ್ಟುಕೊಂಡು ಊರಿಗೆ ಬುದ್ಧಿ ಹೇಳಲು ಬಂದಿದ್ದಾಳೆ.
Soooper sir🙏🙏🙏