ಮಂಗಳೂರು: ಶಾಲಾ ಬಾಲಕನಿಗೆ ಇಬ್ಬರು ವಿದ್ಯಾರ್ಥಿಗಳಿಂದ ಹಲ್ಲೆ

ಸಮಗ್ರ ನ್ಯೂಸ್: ಶಾಲಾ ಬಾಲಕನೋರ್ವನಿಗೆ ಇನ್ನೊಂದು ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ. ಹಲ್ಲೆಗೊಳಗಾದ ಬಾಲಕನನ್ನು ದೇರಳಕಟ್ಟೆ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮನಾಫ್ ಎಂದು ಗುರುತಿಸಲಾಗಿದೆ.

Ad Widget ... ..

ಈತ ಶಾಲೆ ಬಿಟ್ಟು ಬಸ್ಸಿನಲ್ಲಿ ಇಳಿದು ತೊಕ್ಕೊಟ್ಟಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಚೆಂಬುಗುಡ್ಡೆಯ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು ಇದರಿಂದ ಮನಾಫ್‌ನ ತಲೆ ಹಾಗೂ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *