ಇಂದು(ಅ.17) ಕಿಸಾನ್ ಸಮ್ಮಾನ್ 12ನೇ ಕಂತು ಬಿಡುಗಡೆ| ‘ಒಂದು ದೇಶ – ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ

ಸಮಗ್ರ ನ್ಯೂಸ್: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ಇಂದು ವರ್ಗಾವಣೆ ಮಾಡಲಾಗುವುದು.

Ad Widget ... ..

16,000 ಕೋಟಿ ರೂ.ಗಳನ್ನು ಸುಮಾರು ಎರಡು ಕೋಟಿ ರೈತರ ಖಾತೆಗೆ ಜಮಾ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆಯಲಿರುವ ಕೃಷಿ ಸಮ್ಮೇಳನ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿದ್ದಾರೆ.

Ad Widget

ಇದೇ ಸಂದರ್ಭದಲ್ಲಿ ‘ಒಂದು ದೇಶ -ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ ನೀಡಲಿದ್ದು, ಎಲ್ಲಾ ರಸಗೊಬ್ಬರ ಕಂಪನಿಗಳು ‘ಭಾರತ್ ಬ್ರಾಂಡ್’ ಹೆಸರಿನಲ್ಲಿ ಯೂರಿಯಾ ಗೊಬ್ಬರ ಮಾರಾಟ ಮಾಡಲಿವೆ. ದೇಶಾದ್ಯಂತ 600 ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಲೋಕಾರ್ಪಣೆ ಮಾಡಲಾಗುವುದು.

Leave a Comment

Your email address will not be published. Required fields are marked *