ರಾಜ್ಯದಲ್ಲಿ ಜಾನುವಾರುಗಳ ಚರ್ಮಗಂಟು ರೋಗ ಉಲ್ಬಣ| ದ.ಕ ಜಿಲ್ಲೆಯಲ್ಲಿ ಒಂದು ದನ ಸಾವು|

ಸಮಗ್ರ ನ್ಯೂಸ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ಜಾನುವಾರುಗಳ ಚರ್ಮಗಂಟು ರೋಗ ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಒಂದೇ ಮನೆಯ ಮೂರು ದನಗಳಲ್ಲಿ ಶಂಕಿತ ಪ್ರಕರಣ ಪತ್ತೆಯಾಗಿದೆ.

Ad Widget ... ..

ಅದರಲ್ಲಿ ಒಂದು ದನ ಈಗಾಗಲೇ ಮೃತಪಟ್ಟಿದ್ದು, ಎರಡು ದನಗಳು ಚಿಕಿತ್ಸೆಯ ಬಳಿಕ ಬಹುತೇಕ ಗುಣಮುಖವಾಗಿವೆ. ದ.ಕ.ಜಿಲ್ಲಾ ಪಶು ಪಾಲನ ಇಲಾಖೆಯ ಮಾಹಿತಿ ಪ್ರಕಾರ ಬಿಳಿಯೂರಿನ ಮಲ್ಲಡ್ಕದಲ್ಲಿ ಕಾಣಿಸಿಕೊಂಡ ಶಂಕಿತ ಪ್ರಕರಣಕ್ಕೆ ಅ. 8ರಿಂದ ಕೆಎಂಎಫ್‌ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

Ad Widget

ಒಂದು ದನ ಅ. 11ರಂದು ಮೃತಪಟ್ಟಿದೆ. ಆದರೆ ಉಳಿದ 2 ದನಗಳು ಬಹುತೇಕ ಗುಣಮುಖವಾಗಿವೆ. ದನ ಚರ್ಮಗಂಟು ರೋಗ ದಿಂದ ಸತ್ತಿಲ್ಲ, ಅದಕ್ಕೆ ಬೇರೆ ಕಾಯಿಲೆಯೂ ಇತ್ತು ಎನ್ನಲಾಗಿದೆ.

Leave a Comment

Your email address will not be published. Required fields are marked *