ಸೇತುವೆ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆ

ಸಮಗ್ರ ನ್ಯೂಸ್: ಸೇತುವೆ ಬಳಿ ಬೈಕ್ ಬಿಟ್ಟು ಯುವಕನೊಬ್ಬ ನಾಪತ್ತೆಯಾದ ಘಟನೆಯೊಂದು ಪಡುಕೆರೆಯ ಪಾಪನಾಸಿನಿ ನದಿ ಸಮೀಪ ನಡೆದಿದೆ.

Ad Widget ... ..

ನಾಪತ್ತೆಯಾದ ಯುವಕನನ್ನು ದಾವಣಗೆರೆ ಮೂಲದ ಶಿವ ಎಂದು ಗುರುತಿಸಲಾಗಿದೆ. ಯುವಕ ಉಡುಪಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗಿದ್ದು, ಪಾಪನಾಸಿನಿ ನದಿಗೆ ಕಟ್ಟಲಾಗಿರುವ ಸೇತುವೆ ಬಳಿ ಬೈಕ್ ಪತ್ತೆಯಾಗಿದ್ದು, ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Ad Widget


ನಾಪತ್ತೆಯಾದ ಯುವಕನಿಗಾಗಿ ಸ್ಥಳೀಯ ಮುಳುಗು ತಜ್ಞರಿಂದ ಶೋಧ ನಡೆಸಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *