Ad Widget .

ಬಿಗ್ ಬಾಸ್ ಸೀಸನ್ 9| ಇವರೆಲ್ಲಾ ದೊಡ್ಮನೆ ಪ್ರವೇಶಿಸುವ ಸ್ಪರ್ಧಿಗಳು!?

ಸಮಗ್ರ ನ್ಯೂಸ್: ರಿಯಾಲಿಟಿ ಶೋ ಬಿಗ್‌ ಬಾಸ್‌ 9ನೇ ಆವೃತ್ತಿಯ ಮನೆಗೆ ಯಾರೆಲ್ಲಾ ಬರ್ತಿದ್ದಾರೆ ಎಂಬ ಕುತೂಹಲಕ್ಕೆ ಬಹುತೇಕ ತೆರೆ ಬಿದ್ದಿದೆ. ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ ಬಾಸ್‌ ರಿಯಾಲಿಟಿ ಶೋ ಸೆಪ್ಟೆಂಬರ್‌ 24ರಂದು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ.

Ad Widget . Ad Widget .

ಬಿಗ್‌ ಬಾಸ್‌ ಮನೆಗೆ ಯಾರೆಲ್ಲಾ ಬರ್ತಾರೆ ಎಂಬ ಕುತೂಹಲ ಮುಂದುವರಿದಿದ್ದು ಮೂಲಗಳ ಪ್ರಕಾರ ಯಾರೆಲ್ಲಾ ಬರುತ್ತಿದ್ದಾರೆ ಎಂಬ ಮಾಹಿತಿಗಳು ಹೊರಗೆ ಬರುತ್ತಿವೆ. ಬಿಗ್ ಬಾಸ್ ಓಟಿಟಿಯಲ್ಲಿ ವಿಜೇತ ನಾಲ್ವರು ಸ್ಪರ್ಧಿಗಳು ಸೇರಿದಂತೆ ಇನ್ನೂ ಹೊಸಬರು ಹಾಗೂ ಹಳಬರು ಬರುತ್ತಿದ್ದಾರೆ.

Ad Widget . Ad Widget .

ಓಟಿಟಿಯಲ್ಲಿ ಗಮನ ಸೆಳೆದ ಸ್ಪರ್ಧಿಗಳಾದ ನಟ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ 100 ದಿನಗಳ ಮೆಗಾ ಶೋಗೆ ಪ್ರವೇಶಿಸಿದ್ದಾರೆ. ಅಲ್ಲದೇ ಹಳಬರಾದ ಪ್ರಶಾಂತ್‌ ಸಂಬರ್ಗಿ, ಅನುಪಮಾ ಗೌಡ ಹಾಗೂ ದೀಪಿಕಾ ಕೂಡ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಸ್ಪರ್ಧಿಗಳಲ್ಲಿ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಿದ್ದಿರುವ ನಟ ಅನಿರುದ್ದ್‌, ನಟಿ ಪ್ರೇಮಾ ಬರುತ್ತಿದ್ದಾರೆ. ಈ ಮೂಲಕ ಆಕರ್ಷಣೆ ಹೆಚ್ಚಿಸಲಿದ್ದಾರೆ ಎನ್ನಲಾಗಿದೆ.

ಬರ್ತಡೆ ಹಾಡುಗಳಿಂದ ಗಮನ ಸೆಳೆಯುತ್ತಿರುವ ಕಾಫಿನಾಡು ಚಂದು, `ಕಮಲಿ’ ಸೀರಿಯಲ್ ಖ್ಯಾತಿಯ ಅಮೂಲ್ಯ ಗೌಡ ಮತ್ತು ʻಮುದ್ದುಮಣಿಗಳುʼ ಖ್ಯಾತಿಯ ಸಮೀಕ್ಷಾ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ.

ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಪ್ರಿಯಾಂಕ ಕಾಮತ್ ಕೂಡ ಟಿವಿ ಸೀಸನ್ ಬಿಗ್ ಬಾಸ್ 9ರಲ್ಲಿ ಬರಲಿದ್ದಾರೆ. ಇವರ ಜೊತೆ ದಿವ್ಯ ವಸಂತ ಕೂಡ ಇರಲಿದ್ದಾರೆ.

ಮಜಾ ಭಾರತ ಶೋ ಮೂಲಕ ಮೋಡಿ ಮಾಡಿರುವ ಚಂದ್ರಪ್ರಭ ಮತ್ತು ರಾಘವೇಂದ್ರ ಅವರು ಕೂಡ ತಮ್ಮ ಕಾಮಿಡಿ ಮೂಲಕ ದೊಡ್ಮನೆಯಲ್ಲಿ ರಂಜಿಸಲಿದ್ದಾರೆ. ಸರಿಗಮಪ ಶೋನ ಗಾಯಕಿ ಆಶಾ ಭಟ್ ಕೂಡ ಇರಲಿದ್ದಾರೆ. ಸೆಪ್ಟೆಂಬರ್‌ 24ರಂದು ಸಂಜೆ 6ಕ್ಕೆ ಗ್ರ್ಯಾಂಡ್‌ ಲಾಂಚ್‌ನಲ್ಲಿ ಸ್ಪರ್ಧಿಗಳ ಪಟ್ಟಿ ಅಧಿಕೃತವಾಗಿ ತಿಳಿಯಲಿದೆ.

Leave a Comment

Your email address will not be published. Required fields are marked *