ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಚಾಮರಾಜನಗರ: ತಾಲೂಕಿನ ಪುಣಜನೂರು ಬಳಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ದೊಡ್ಡ ಮೂಡಹಳ್ಳಿ ಗ್ರಾಮದ ನಂದೀಶ್ ನಾಯಕ (36), ಗೋಡೆಮಡುವಿನ ದೊಡ್ಡಿಯ ರಂಗಸ್ವಾಮಿ ಬಂಧಿತರು.

Ad Widget ... ..

ಜಿಂಕೆ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳೀಯ ವಲಯ ಅರಣ್ಯ ಅಧಿಕಾರಿಗಳು ನಂದೀಶ್ ನ ಮನೆಗೆ ದಾಳಿ ನಡೆಸಿದ್ದಾರೆ. ಆತನಲ್ಲಿ ಜಿಂಕೆ ಮಾಂಸದ ಮೂಲದ ಬಗ್ಗೆ ವಿಚಾರಿದಾಗ ಗೋಡೆಮಡುವಿನ ದೊಡ್ಡಿಯ ರಂಗಸ್ವಾಮಿಯಿಂದ ಖರೀದಿಸಿದ್ದಾಗಿ ತಿಳಿಸಿದ್ದಾನೆ.

Ad Widget

ನಂತರ ರಂಗಸ್ವಾಮಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ವಿಚಾರಿಸಿದಾಗ ಗೋಡೆಮಡುವಿನದೊಡ್ಡಿಯ ಹಳ್ಳದ ಬಳಿ ಜಿಂಕೆಯನ್ನು ಬಲೆ ಬೀಸಿ ಹಿಡಿದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಜಿಂಕೆ ಚರ್ಮ ಸುಟ್ಟು ಮಾಂಸವನ್ನು ನಂದೀಶ್‌ಗೆ ಮಾರಾಟ ಮಾಡಿದ್ದಾನೆ. ಇದಲ್ಲದೇ ಆತನ ಬಳಿ 3 ಕೆಜಿ ತೂಕದ ಆನೆದಂತವನ್ನೂ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ದಂತ ಕಾಡಿನಲ್ಲಿ ದೊರಕಿತೆಂದು ಆರೋಪಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ

Leave a Comment

Your email address will not be published. Required fields are marked *