ಶಿವಮೊಗ್ಗ ಚೂರಿ ಇರಿತ ಪ್ರಕರಣ| ಆರೋಪಿ ಮೇಲೆ ಪೊಲೀಸ್ ಪೈರಿಂಗ್

ಸಮಗ್ರ ನ್ಯೂಸ್: ಪ್ರೇಮ್ ಸಿಂಗ್ ಎಂಬಾತನಿಗೆ ಆತನ ಮನೆ ಮುಂದೆ ಚೂರಿ ಇರಿತವಾಗಿದ್ದು , ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

Ad Widget ... ..

ಉಪ್ಪಾರ ಕೇರಿಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪ್ರೇಮ್ ಗೆ ಚೂರಿ ಇರಿದು ಬೈಕ್ ಬಿಟ್ಟು ಪರಾರಿಯಾಗಿದ್ದರು. ಆ ಪ್ರಕರಣದ ಆರೋಪಿ ಎನ್ನಲಾದ ಜಬೀಉಲ್ಲಾ ಎಂಬಾತನ ಕಾಲಿಗೆ ಪೊಲೀಸರು ತಡರಾತ್ರಿ ಫೈರಿಂಗ್ ಮಾಡಿದ್ದಾರೆ.

Ad Widget

ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋ ಶಂಕರ ಲೇಔಟ್ ನಲ್ಲಿ ಜಬೀವುಲ್ಲಾ ಬಂಧನಕ್ಕೆ ತೆರಳಿದ್ದ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದು, ಸದ್ಯ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *