ಸಮಗ್ರ ನ್ಯೂಸ್: ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಬಳಿಯಲ್ಲಿ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದಿದ್ದು ಮನೆಯೊಳಗಿನ ಇಬ್ಬರು ಮಕ್ಕಳು ಮಣ್ಣಲ್ಲಿ ಹೂತು ಹೋಗಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಕುಮಾರದಾರ ಪರ್ವತಮುಖಿ ಬಳಿಯ ಕುಸುಮಾಧರ ಎಂಬವರ ಮನೆ ಕುಸಿತಗೊಂಡಿದ್ದು ಅವರ ಇಬ್ಬರು ಹೆಣ್ಣುಮಕ್ಕಳು ಮಣ್ಣು ಪಾಲಾಗಿದ್ದು, ನಿರಂತರ ಕಾರ್ಯಾಚರಣೆ ಬಳಿಕ ತಡರಾತ್ರಿ ಮೃತದೇಹಗಳನ್ನು ಹೊರತೆಗೆಯಲಾಯಿತು.
ಮೇಘಸ್ಪೋಟ ಮತ್ತು ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದ್ದು, ಎರಡು ದಿನ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಸಂಪಾಜೆ ಕಲ್ಲುಗುಂಡಿಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಕಾರ್ ಗಳು ನೀರಿನಲ್ಲಿ ತೇಲಿವೆ. ಸಂಪಾಜೆ, ಕಲ್ಲುಗುಂಡಿ ಪರಿಸರದಲ್ಲಿ ಅಧಿಕ ಮಳೆಯಾಗುತ್ತಿದ್ದು. ಅಪಾಯದಲ್ಲಿದ್ದ 15 ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಕೊಡಗಿನ ಜೋಡುಪಾಲದಂತೆ ಅರೆಕಲ್ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿರುವ ಶಂಕೆ ವ್ಯಕ್ತಿವಾಗಿದೆ