ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರ ಕೋಡಿ| ಸುರತ್ಕಲ್ ನಲ್ಲಿ ಇಬ್ಬರು ಯುವಕರ ಮೇಲೆ ಮಾರಕದಾಳಿ; ಓರ್ವ ಕಗ್ಗೊಲೆ

ಸಮಗ್ರ ನ್ಯೂಸ್: ಸುರತ್ಕಲ್ ಪೇಟೆಯಲ್ಲಿ ಮತ್ತೊಬ್ಬ ಯುವಕನ ಮೇಲೆ ತಲವಾರು ದಾಳಿ ನಡೆದಿದೆ. ಬಟ್ಟೆ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಯುವಕನನ್ನು ಭೀಕರವಾಗಿ ಕಡಿದು ಹಾಕಿದ್ದಾರೆ. ಯುವಕ ಸ್ಥಳದಲ್ಲೇ ಸಾವು ಕಂಡಿದ್ದಾನೆ ಎನ್ನುವ ಮಾಹಿತಿಗಳಿವೆ.

Ad Widget ... ..

ಕಾಟಿಪಳ್ಳ ಮಂಗಳಪೇಟೆ ನಿವಾಸಿ ಫಾಜಿಲ್ (26) ಮೃತ ಯುವಕ. ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ.‌ ಹಳೆ ದ್ವೇಷಕ್ಕೆ ಕೃತ್ಯ ನಡೆದಿದೆಯೋ, ವೈಯಕ್ತಿಕ ದ್ವೇಷದಿಂದ ನಡೆದಿದೆಯೋ ಗೊತ್ತಿಲ್ಲ. ಮಾರಣಾಂತಿಕ ದಾಳಿ ನಡೆದ ಕೂಡಲೇ ಎಜೆ ಆಸ್ಪತ್ರೆಗೆ ತರಲಾಗಿತ್ತು.

Ad Widget

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಮಂಗಳೂರು ಹೊರವಲಯದ ಸುರತ್ಕಲ್ ಪೇಟೆಯಲ್ಲಿ ಹತ್ಯೆ ನಡೆದಿರುವುದು ಆತಂಕ ಮೂಡಿಸಿದೆ. ಹಿಂದಿನ ಚುನಾವಣೆ ಸಂದರ್ಭದಲ್ಲಿ ಮೂಡಿದ್ದ ದ್ವೇಷದ ವಾತಾವರಣ ಮತ್ತೆ ಮರುಕಳಿಸುತ್ತಾ ಎನ್ನುವ ಆತಂಕ ಮೂಡಿದೆ.

Leave a Comment

Your email address will not be published. Required fields are marked *