ನಟಿ ಸಂಯುಕ್ತಾ ಹೆಗಡೆ ಚಿತ್ರೀಕರಣದ ವೇಳೆ ಅವಘಡ; ಗಂಭೀರ ಗಾಯ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಯುಕ್ತಾ ಹೆಗಡೆಗೆ ಶೂಟಿಂಗ್ ವೇಳೆ ಅವಘಡವಾಗಿದ್ದು, ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ.

Ad Widget ... ..

ಕ್ರೀಮ್ ಎಂಬ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಕಾಲೆತ್ತಿ ಹೊಡೆಯಲು ಹೋಗಿ ಸಂಯುಕ್ತಾ ಕೆಳಕ್ಕೆ ಬಿದ್ದಿದ್ದಾರೆ. ಬಳಿಕ ತೀವ್ರ ನೋವಿನಿಂದ ಕೂಗಿಕೊಂಡಿದ್ದಾರೆ.

Ad Widget

ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ವೈದ್ಯರು 15 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *