ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ

ಮಂಗಳೂರು.ಮೇ23:‌ ಇಲ್ಲಿನ ಮೂಡುಬಿದಿರೆ ಪುರಸಭಾ ವ್ಯಾಪ್ತಿ ಕಲ್ಲಬೆಟ್ಟು ಮೂಲದ ದಂಪತಿಯ ಮಗು ರಿಯಾದ್ ನಲ್ಲಿ ನಡೆದಕಾರು ಅಪಘಾತದಲ್ಲಿ ಮೃತಪಟ್ಟಿದೆ.

Ad Widget ... ..

ಕಲ್ಲಬೆಟ್ಟು ಗಂಟಾಲ್ಕಟ್ಟೆ ಮೂಲದ ಆದಿಲ್ ದಂಪತಿ ರಿಯಾದ್ ನಲ್ಲಿ ವಾಸವಾಗಿದ್ದಾರೆ. ಆದಿಲ್ ಅವರು ಟ್ರಾವೆಲ್ ಏಜೆನ್ಸಿ ಹೊಂದಿದ್ದಾರೆ. ಅವರ ಕುಟುಂಬ ತಮ್ಮ ಕಾರಿನಲ್ಲಿ ದಮ್ಮಾಮ್ ಗೆ ತೆರಳಿತ್ತು. ಕೆಲಸ ಮುಗಿಸಿ ರಿಯಾದ್ ಗೆ ವಾಪಾಸಾಗುತ್ತಿದ್ದಾಗ ಆದಿಲ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ.

Ad Widget

ಘಟನೆಯಲ್ಲಿ ಕಾರಿನಲ್ಲಿದ್ದ ದಂಪತಿಗಳ ಒಂದು ವರ್ಷದ ಗಂಡು ಮಗು ಓವೈಸಿ ಆದಿಲ್ ಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ರಿಯಾದ್ ನ ನ್ಯಾಶನಲ್ ಗಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಇನ್ನು ಮೃತಪಟ್ಟಿರುವ ಮಗುವಿನ ಅಂತ್ಯಕ್ರಿಯೆ ರಿಯಾದ್ ನಲ್ಲೇ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.Attachments area

Leave a Comment

Your email address will not be published. Required fields are marked *