Ad Widget .

ಫೋನ್‌ ಮೂಲಕವೇ ಅಂಗಾರ ಕ್ಯಾಬಿನೆಟ್ ಕಂಟ್ರೋಲ್ ಮಾಡ್ತಾರೆ – ಎಸ್.ಟಿ ಸೋಮಶೇಖರ್

ಸಮಗ್ರ ನ್ಯೂಸ್: ಕಸ್ತೂರಿ ರಂಗನ್ ವರದಿಯನ್ನು ಏಕಪಕ್ಷಿಯವಾಗಿ ತಿರಸ್ಕಾರ ಮಾಡಬೇಕು ಎಂದು ಸುಳ್ಯದಲ್ಲಿ ಕುಳಿತು ಫೋನ್ ಮೂಲಕ ಎಲ್ಲಾ ಸಚಿವರನ್ನು ರಿಮೋಟ್ ಕಂಟ್ರೋಲ್ ಮಾಡುವ ತಾಕತ್ತು ಇದ್ದರೆ ಅದು ಸಚಿವ ಅಂಗಾರ ಅವರಿಗೆ ಮಾತ್ರ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು. ಅವರು ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಸಹಕಾರಿ ಸಂಘದ ದೀನ್‌ದಯಾಳ್ ರೈತ ಸಭಾಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕ್ಯಾಬಿನೆಟ್​ನಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪನೆ ಬಂತು. ಸಚಿವರಾದ ಅಂಗಾರ ಅವರು ಸುಳ್ಯದಿಂದಲೇ ಎಲ್ಲಾ ಮಂತ್ರಿಗಳಿಗೂ ಫೋನ್ ಮಾಡಿ ಈ ವರದಿಯನ್ನು ಎಲ್ಲರೂ ತಿರಸ್ಕಾರ ಮಾಡುವಂತೆ ಹೇಳಿದ್ದಾರೆ. ಅಂಗಾರ ಅವರು ಕ್ಯಾಬಿನೆಟ್​ನಲ್ಲಿ ಯಾವುದೇ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ತಮ್ಮ ಕ್ಷೇತ್ರ ಸುಳ್ಯದ ವಿಚಾರ ಬಂದಾಗ ಸದಾ ಎಚ್ಚರವಾಗಿರುತ್ತಾರೆ ಎಂದರು.

Ad Widget . Ad Widget . Ad Widget .

ಸುಳ್ಯಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿ ಅವರನ್ನು ಪಡೆದಿರುವುದು ಇಲ್ಲಿನ ಜನತೆಯ ಭಾಗ್ಯ. ಸಚಿವ ಅಂಗಾರರು ಅಪರೂಪದ ಮಂತ್ರಿಗಳಲ್ಲಿ ಒಬ್ಬರು. ಅವರು ಉತ್ತಮ ವ್ಯಕ್ತಿತ್ವದ ವ್ಯಕ್ತಿಯೂ ಹೌದು ಎಂದು ಅಂಗಾರರನ್ನು ಸಹಕಾರ ಸಚಿವರು ಹಾಡಿ ಹೊಗಳಿದರು.

ಇದೇ ವೇಳೆ ಮಾತನಾಡಿದ ಎಸ್.ಟಿ ಸೋಮಶೇಖರ್ ಅಕ್ಟೋಬರ್ ನಲ್ಲಿ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲಾಗುವುದು. ಬಜೆಟ್ ನಲ್ಲಿ 33 ಸಾವಿರ ಕೋಟಿಯಷ್ಟು ಮೊತ್ತವನ್ನು ಸಹಕಾರ ಸಂಘಗಳ ಸದಸ್ಯರಿಗೆ ಸಾಲ ವಿತರಣೆಗೆ ಮೀಸಲಿರಿಸಿದ್ದು, ರೈತರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

Leave a Comment

Your email address will not be published. Required fields are marked *