ಸಮಗ್ರ ನ್ಯೂಸ್: ವಿಶ್ವ ಆಯತ್ಲೆಟಿಕ್ಸ್ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ತಾರೆ ನೀರಜ್ ಚೋಪ್ರಾ ಅವರು ರಜತ ಪದಕಕ್ಕೆ ತೃಪ್ತಿ ಪಟ್ಟರು. ನೀರಜ್ ಗೆ ಪ್ರಬಲ ಸ್ಪರ್ಧೆ ನೀಡಿದ ಆಯಂಡರ್ಸನ್ ಪೀಟರ್ ಮೂರು ಬಾರಿ 90 ಮೀಟರ್ ಗಿಂತ ಹೆಚ್ಚು ಎಸೆದು ಬಂಗಾರದ ಪದಕ ಪಡೆದರು.
ಇಂದಿನ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಅವರು ಮೊದಲ ಎಸೆತ ಫೌಲ್, ಎರಡನೇ ಎಸೆತ 82.39, ಮೂರನೇ ಎಸೆತವನ್ನು 86.37, ನಾಲ್ಕನೇ ಎಸೆತ 88.13 ಮತ್ತು ಐದನೇ ಎಸೆತ ಫೌಲ್ ಆಯಿತು.
ಶುಕ್ರವಾರ ನಡೆದಿದ್ದ ಮೊದಲ ಸುತ್ತಿನ ನೀರಜ್ ಮೊದಲ ಎಸೆತದಲ್ಲೇ 88.39 ಮೀ. ದೂರವನ್ನು ದಾಖಲಿಸಿ ಪದಕ ಸುತ್ತಿಗೆ ನೆಗೆದದ್ದು ವಿಶೇಷವಾಗಿತ್ತು. ಇವರೊಂದಿಗೆ ಭಾರತದ ಮತ್ತೋರ್ವ ಜಾವೆಲಿನ್ ಎಸೆತಗಾರ ರೋಹಿತ್ ಯಾದವ್ ಕೂಡ ಫೈನಲ್ ಪ್ರವೇಶಿಸಿದ್ದರು. ರೋಹಿತ್ ಯಾದವ್ ಅವರು ಫೈನಲ್ ಪಂದ್ಯಗಳು 78.72 ಮೀ ಶ್ರೇಷ್ಠ ಎಸೆತದ ಮೂಲಕ ಕೂಟದಲ್ಲಿ 10ನೇ ಸ್ಥಾನಿಯಾದರು.