ಕಿರುತೆರೆ ಧಾರಾವಾಹಿ ಹಿರಿಯ ನಟ ಬಾಲಾಜಿ ನಿಧನ

ಬೆಂಗಳೂರು: ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ ಹಿರಿಯ ನಟ ಯಲಹಂಕ ಬಾಲಾಜಿ ನಿಧನರಾಗಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಿರಿಯ ನಟ ಬಾಲಾಜಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Ad Widget ... ..

ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟ ಬಾಲಾಜಿ ರಾಜಕೀಯ ಕ್ಷೇತ್ರದಲ್ಲಿಯೂ ತೊಡಗಿಕೊಂಡಿದ್ದರು. ಹಿರಿಯ ಕಲಾವಿದನ ಅಗಲಿಕೆಗೆ ಸ್ಯಾಂಡಲ್​ವುಡ್ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

Ad Widget

ಮಾಯಾಮೃಗ’, ‘ಮುಕ್ತ ಮುಕ್ತ’, ‘ಮಹಾ ಪರ್ವ’, ‘ಮನ್ವಂತರ’, ‘ಮುಕ್ತ’, ‘ಮಿಂಚು’, ‘ಮಗಳು ಜಾನಕಿ’, ‘ಚಂದಿರ’ ಮುಂತಾದ ಧಾರಾವಾಹಿಗಳಲ್ಲಿ ಯಲಹಂಕ ಬಾಲಾಜಿ ಅಭಿನಯಿಸಿದ್ದರು.

Leave a Comment

Your email address will not be published. Required fields are marked *