ದಂತಚೋರರ‌ ಬೆನ್ನಿಗೆ ನಿಂತರಾ ಪ್ರಜ್ವಲ್ ರೇವಣ್ಣ? ಸಿಎಂ ಗೆ ಪತ್ರ ಬರೆದ‌ ಸಂಸದೆ ಮನೇಕಾ ಗಾಂಧಿ

ಸಮಗ್ರ ನ್ಯೂಸ್: ಸಂಸದೆ ಮನೇಕಾ ಗಾಂಧಿ ಸಿಎಂ ಬೊಮ್ಮಾಯಿಗೆ ಬರೆದ ಪತ್ರವೊಂದು ಸದ್ಯ ಭಾರೀ ಸಂಚಲನ ಸೃಷ್ಟಿಸಿದೆ. ಮನೇಕಾ ಗಾಂಧಿ ಬರೆದಿರುವ ಪತ್ರದಲ್ಲಿ ಪ್ರಜ್ವಲ್​ ರೇವಣ್ಣ ಹಾಗೂ ರಾಜ್ಯ ಅರಣ್ಯ ಇಲಾಖೆ ವಿರುದ್ಧ ಭಾರೀ ದೊಡ್ಡ ಆರೋಪವನ್ನೇ ಮಾಡಿದ್ದಾರೆ.

Ad Widget ... ..

ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಆನೆ ದಂತ ಪ್ರಕರಣ ಸಂಬಂಧಿಸಿದಂತೆ ಹಾಸನದಿಂದ ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ರಾಷ್ಟ್ರ ರಾಜಧಾನಿ ದೆಹಲಿ ಮಟ್ಟದಲ್ಲೂ ಭಾರೀ ಚರ್ಚೆಯಾಗುತ್ತಿದೆ. ಮನೇಕಾ ಗಾಂಧಿ ಈ ಕುರಿತು ರಾಜ್ಯ ಅರಣ್ಯ ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರ ಆರೋಪಿಸಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

Ad Widget

ರಾಜ್ಯ ಅರಣ್ಯ ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರ ನಡೆಯುತ್ತಿದೆ ಅಂತ ಆರೋಪಿಸಿ ದೆಹಲಿ ಮಟ್ಟದ ನಾಯಕಿ, ಸಂಸದೆ ಮನೇಕಾ ಸಂಜಯ್ ಗಾಂಧಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

ಕೇಸ್​ನ ಆರೋಪಿಗಳು ಸಂಸದ ಪ್ರಜ್ವಲ್ ರೇವಣ್ಣ ಬೆಂಬಲಿಗರಾಗಿದ್ದು ಅವರ ರಕ್ಷಣೆಗೆ ಪ್ರಕರಣವನ್ನು ಸಿಕೆ ಅಚ್ಚುಕಟ್ಟು ಠಾಣೆಯಿಂದ ಹಾಸನಕ್ಕೆ ವರ್ಗಾಯಿಸಲು ಅರಣ್ಯಾಧಿಕಾರಿಗಳಿಗೆ ಪ್ರಜ್ವಲ್​ ಒತ್ತಡ ಹೇರಿದ್ದಾರೆಂದು ಆರೋಪಿಸಲಾಗಿದೆ. ಆದರೆ ಇದಕ್ಕೆ ಈ ಹಿಂದೆ ಇದ್ದ ಡಿಸಿಪಿ ಹರೀಶ್ ಪಾಂಡೆ ನಿರಾಕರಿಸಿದ್ದರು. ಅಲ್ಲದೇ ಕೇಸ್​ನಲ್ಲಿ ಪ್ರಜ್ವಲ್ ಕಡೆಯ ಅರಣ್ಯ ಅಧಿಕಾರಿಗಳು ಭಾಗಿಯಾಗಿದ್ದಾರಂತೆ.

ಸದ್ಯ ಹಾಸನ ಆರ್​ಎಫ್‌ಒ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ತಮ್ಮ ದೂರಿನಲ್ಲಿ ಮನೇಕಾ ಗಾಂಧಿ ಉಲ್ಲೇಖ ಮಾಡಿದ್ದಾರೆ. ಮಾತ್ರವಲ್ಲದೆ ಹಾಸನ ರೇಂಜ್ ಆಫೀಸರ್ ಬಗ್ಗೆ ಸೂಕ್ತ ತನಿಖೆ ಮಾಡಲು ಮನವಿ ಕೂಡ ಮಾಡಿದ್ದಾರೆ. ಆದ್ರೆ ಅರಣ್ಯಾಧಿಕಾರಿ ವಿರುದ್ಧ ಮಾಡಲಾದ ಆರೋಪಗಳು ಸತ್ಯಕ್ಕೆ ದೂರವಾದವು ಅಂತ ಡಿಸಿಎಫ್​ ರವೀಂದ್ರ ಕುಮಾರ್​ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಮಾತ್ರವಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತೇವೆ ಅಂತ ಹೇಳಿದ್ದಾರೆ. ಒಟ್ಟಾರೆ ಆನೆ ದಂತ ಕೇಸ್​ ಹಾಸನದಿಂದ ದೆಹಲಿ ಮಟ್ಟಕ್ಕೆ ಹೋಗಿದ್ದು ಸಿಎಂ ಪ್ರತಿಕ್ರಿಯೆ ಏನಿದೆ ಎಂದು ನೋಡಬೇಕಿದೆ.

Leave a Comment

Your email address will not be published. Required fields are marked *