ಸಮಗ್ರ ನ್ಯೂಸ್: ಉದ್ಯಮಿ ಹಾಗೂ ಐಪಿಎಲ್ ಹೊಸ ರೂಪ ಕೊಟ್ಟು ಹೆಸರು ಮಾಡಿದ್ದ ಲಲಿತ್ ಮೋದಿಯವರು ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ಮಾಡುವುದಾಗಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಅವರ ಹಳೆಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಪ್ರಾರಂಭವಾಗಿದೆ.
“ಸುಶ್ಮಿತಾ ಸೇನ್ ನನ್ನ ಎಸ್ಎಂಎಸ್ಗೆ ಉತ್ತರಿಸಿ’ ಎಂದು ಲಲಿತ್ ಮೋದಿ ಮಾಡಿದ್ದ ಟ್ವೀಟ್ ಈಗ ಸದ್ದು ಮಾಡುತ್ತಿದೆ.
ಆ ಟ್ವೀಟ್ ಮಾಡಿದ್ದು 2013ರಲ್ಲಿ. ಆದರೆ, ಈಗ ಹಾಸ್ಯಮಯ ಪ್ರತಿಕ್ರಿಯೆಗಳಿಗೆ ಆ ಒಂದು ಸಣ್ಣ ಪೋಸ್ಟ್ ಕಾರಣವಾಗಿದೆ.
ಜುಲೈ 14ರಂದು ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಲಲಿತ್ ಮೋದಿ ಅವರು ತಮ್ಮ “ಬೆಟರ್ ಹಾಫ್’ ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಿದರು. ಅವರ ರಜೆಯ ಮೂಡ್ನ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಲಲಿತ್ ಮೋದಿ ಅವರು 2013ರಲ್ಲಿ ಸುಶ್ಮಿತಾಗೆ ಪೋಸ್ಟ್ ಮಾಡಿದ ನಿರ್ದಿಷ್ಟ ಟ್ವೀಟ್ ಹಿಂದಿನ ಕಥೆಯೂ ಸ್ವಾರಸ್ಯಕರ. ಈಗ ಟ್ರೆಂಡಿಂಗ್ ಆಗಿರುವ ಲಲಿತ್ ಮೋದಿಯ “ನನ್ನ ಎಸ್ಎಂಎಸ್ ಗೆ ಉತ್ತರಿಸಿ’ ಎಂಬ ಟ್ವೀಟ್ ಮೀಮ್ಗಳು ಮತ್ತು ಜೋಕ್ಗಳಿಗಾಗಿ ಬಳಕೆಯಾಗಿದೆ.







