ಸಮಗ್ರ ನ್ಯೂಸ್: ಭಾರತದ ಹಲವಾರು ನಗರಗಳಲ್ಲಿ ಮೈಕ್ರೋ-ಬ್ಲಾಗಿಂಗ್ ಸೇವೆ ಟ್ವಿಟರ್ ಸರ್ವರ್ ಡೌನ್ ಆಗಿದ್ದು, ಸೇವೆ ಲಭಿಸದೇ ಬಳಕೆದಾರರು ಪರದಾಡುತ್ತಿದ್ದಾರೆ. ಹಲವಾರು ಬಳಕೆದಾರರು ಫೋನ್ಗಳು ಮತ್ತು ಡೆಸ್ಕ್ ಟಾಪ್ಗಳೆರಡರಲ್ಲೂ ಟ್ವಿಟ್ಟರ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಸಂಜೆ 4:45 ರಿಂದ ಸಂಜೆ 5:00 ರವರೆಗೆ ಟ್ವಿಟ್ಟರ್ನ ದೂರುಗಳು ಹೆಚ್ಚಾಗುತ್ತಲೇ ಇವೆ. ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್ನಿಂದ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಲಾಗುತ್ತಿದೆ.