Ad Widget .

ಆರೋಗ್ಯ ಸುಧಾರಿಸಿದರೂ ಆಸ್ಪತ್ರೆಯಲ್ಲೇ ಉಳಿದ ಕುಟುಂಬ ಮನೆಬಾಡಿಗೆ ಕಟ್ಟಲು ಕಾಸಿಲ್ಲದೆ ಆಶ್ರಮ ಸೇರಿದರು

ಕಾರ್ಕಳ: ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿ ಗುಣಮುಖರಾದ  ಮೇಲೂ ಮನೆಯ ಬಾಡಿಗೆ ಕಟ್ಟಲು ಕೈಯಲ್ಲಿ ಬಿಟ್ಟಿ ಕಾಸಿಲ್ಲದೆ ಮಹಿಳೆಯೊಬ್ಬರು ಕುಟುಂಬ ಸಮೇತ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲೇ ಉಳಿದ ಘಟನೆ ಮೇ 22 ರಂದು ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೆಲ ಸಮಯದ ಹಿಂದೆ ಸರಕಾರಿ ಆಸ್ಪತ್ರೆಗೆ ದಾಖಲಾದ ಪುತ್ತಿಗೆಯ ಸಂಪಿಗೆ ನಿವಾಸಿ ಪಾರ್ವತಿ ಮತ್ತು ಜೊತೆಗಿದ್ದ ಪತಿ ವಿವೇಕ್ ಮತ್ತು ಮಗ ಅಕ್ಷಯ್ ಈ ಅಸಾಹಯಕ ಸ್ಥಿತಿಗೆ ತಲುಪಿದವರು.

Ad Widget . Ad Widget . Ad Widget .

ನಂತರ ಈ ಬಗ್ಗೆ ವೈದ್ಯರೊಬ್ಬರು ಸ್ಥಳೀಯ ಪುರಸಭಾ ಸದಸ್ಯ ಶುಭದ ರಾವ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ರೋಗಿ ಗುಣಮುಖರಾದ ನಂತರ ಹೆಚ್ಚು ದಿನ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲು ಅವಕಾಶ ಇಲ್ಲ ಎಂದಿದ್ದರು. ರಾವ್ ಅವರು ಪಾರ್ವತಿಯವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಅವರನ್ನು ಕಟುಂಬ ಸಮೇತ ಜರಿಗುಡ್ಡೆಯಲ್ಲಿರುವ ಆಯಿಷಾ ಎಂಬವರು ನಡೆಸುತ್ತಿರುವ ಸುರಕ್ಷಾ ಆಶ್ರಮಕ್ಕೆ ಸೇರಿಸಿ ತಕ್ಷಣಕ್ಕೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳನ್ನು ನೀಡಿ ಸಹಕರಿಸಿದ್ದಾರೆ.

ಆಯಿಷಾ ಅವರು ಸುಮಾರು 50ಕ್ಕೂ ಹೆಚ್ಚು ಅಸಹಾಯಕರಿಗೆ ತಮ್ಮ ಆಶ್ರಮದಲ್ಲಿ ಆಶ್ರಯ ನೀಡುತ್ತಿದ್ದಾರೆ.

Leave a Comment

Your email address will not be published. Required fields are marked *