Ad Widget

ಹಣದಾಸೆಯಿಂದ‌ ಎಟಿಎಂ ವಾಹನಕ್ಕೆ ಕನ್ನ ಹಾಕಿದ ಖದೀಮರು. ಸಿಕ್ಕಿಬೀಳುವ ಭಯದಲ್ಲಿ ಜೊತೆಗಿದ್ದಾತನ ಮರ್ಡರ್ ಮಾಡಿದ್ರು!

ಬೆಂಗಳೂರು : ಲಕ್ಷ ಲಕ್ಷ ಹಣ ಸಂಪಾದನೆ ಮಾಡುವ ಉದ್ದೇಶದಿಂದ 4 ಜನ ಸ್ನೇಹಿತರು, ಏಟಿಎಂಗೆ ಹಣ ತುಂಬಾವ ವಾಹನದಿಂದಲೇ ಕಳವು ಮಾಡಿ, ಇನ್ನೇನೂ ಹಣ್ಣ ಕದ್ದ ತಮ್ಮ ಸಹಚರ ಸಿಕ್ಕಿಹಾಕುತ್ತಾನೆ ಎನ್ನುವ ವೇಳೆ ಕೊಲೆ ಮಾಡಿ ಜೈಲುಪಾಲಾದ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ಕೊಲೆಯಾದವನನ್ನು ಅಬ್ದುಲ್ ಎಂದು ಗುರುತಿಸಲಾಗಿದೆ.  ಮಹೇಶ್, ಮಧುಸೂದನ್, ಪ್ರಸನ್ನ, ಕುಮಾರ್ ಆರೋಪಿಗಳು. 

Ad Widget . Ad Widget . Ad Widget . Ad Widget . Ad Widget . Ad Widget

ಜೀವನದಲ್ಲಿ ಹೇಗಾದ್ರು ಮಾಡಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿ  ಜೀವನದ ತುಂಬೆಲ್ಲಾ ಹಾಯಾಗಿ  ಇರುವ ಯೋಜನೆಯಲ್ಲಿ ತೊಡಗಿದ್ದ ನಾಲ್ಕು ಮಂದಿ ಗೆಳೆಯರಿಗೆ   ಪರಿಚಯವಾದದ್ದು ಆಕ್ಸಿಸ್ ಬ್ಯಾಂಕ್ ಏಟಿಎಂ ವಾಹನದ ಡ್ರೈವರ್ ಆಗಿದ್ದ ಅಬ್ದುಲ್.  ಈತನ ಜೊತೆ ಸೇರಿ 4 ಖದೀಮರು ತಮ್ಮ ಹಣ ಮಾಡುವ ಉದ್ದೇಶವನ್ನು ಬಿಚ್ಚಿದ್ದರು.  ಈ ಕೆಲಸಕ್ಕೆ ಮೊದಲೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ತಯಾರಾಗಿದ್ದ ಅಬ್ದುಲ್ ಗೆ ಮತ್ತಷ್ಟು ಆನೆ ಬಲ ಬಂದಂತೆ ಆಯಿತು.  ಈತ ನಾಲ್ವರು ಖದೀಮ ಮಾತಿಗೆ ಒಪ್ಪಿ, ಡೀಲಿಗಿಳಿದಿದ್ದ. ಅದರಂತೆ ಬೆಂಗಳೂರಿನ ‌ನಾಗವಾರದ ಆ್ಯಕ್ಸಿಸ್ ವಾಹನದ ಎಟಿಎಂಗೆ ಹಣ ತುಂಬುವ ವೇಳೆ ವಾಹನದಲ್ಲಿದ್ದ 75 ಲಕ್ಷ ರೂ.ಗಳನ್ನು ಅದೇ ವಾಹನದ ಚಾಲಕ ಅಬ್ದುಲ್ಲ್ ಎತ್ತಾಕೊಂಡು ಎಸ್ಕೇಪ್ ಆಗಿದ್ದ.

Ad Widget . Ad Widget .

ಹಣದೊಂದಿಗೆ ಬಂದಿದ್ದ ಅಬ್ದುಲ್ಲನ ಜೊತೆ ಮಹೇಶ್, ಮಧುಸೂದನ್, ಪ್ರಸನ್ನ, ಕುಮಾರ್ ಜೊತೆಯಾಗಿದ್ದು, ಬಳಿಕ ಶಿವಮೊಗ್ಗ, ಚಿಕ್ಕಮಗಳೂರು ‌ಮುಂತಾದೆಡೆ ಸುತ್ತಾಡಿ ಸಕಲೇಶಪುರ ತಲುಪಿದ್ದಾರೆ. ಇಲ್ಲಿ ತಾವು ಕದ್ದ ಹಣವನ್ನು‌ ಹಂಚಿಕೊಳ್ಳಲು ಪ್ಲ್ಯಾನ್ ಮಾಡಿದ್ದು, ಇಲ್ಲಿನ ಬ್ಯೂಟಿಸ್ಪಾಟ್ ಬಳಿ ಐವರು ಹಣ ಪಾಲುಮಾಡಿಕೊಳ್ಳಲು ಶುರು ಮಾಡಿದ್ರು. ಈ ವೇಳೆ ದರೋಡೆಯಾದ ಬಗ್ಗೆ ಪೊಲೀಸರಿಗೆ‌ ಮಾಹಿತಿ ಸಿಕ್ಕಿದ್ದು, ಖದೀಮರಿಗೆ ಒಳಗೊಳಗೆ ಭಯ ಶುರುವಾಗಿದೆ. ಹಣ ಕದ್ದ ಅಬ್ದುಲ್ಲ ಒಂದಲ್ಲಾ ಒಂದು ದಿನ ಸಿಕ್ಕಿ ಬೀಳುತ್ತಾನೆ. ಇದರಿಂದ ನಾವೆಲ್ಲರೂ ಜೈಲುಪಾಲಾಗುತ್ತೇವೆ ಎಂದು ಅಂದುಕೊಂಡ ಗೆಳೆಯರು ಡ್ರೈವರ್ ಅಬ್ದುಲ್ಲನನ್ನು‌ ಸಕಲೇಶಪುರದ ಬ್ಯೂಟಿಸ್ಪಾಟ್ ಬಳಿ ಕಟ್ಟಿಗೆಯಿಂದ ಹೊಡೆದು ಕೊಲೆಮಾಡಿ, ಘಾಟಿಯಿಂದ ಕೆಳಗೆಸೆದು ಎಸ್ಕೇಪ್ ಆಗಿದ್ದರು.
ಘಟನೆಯ ಜಾಡು ಹಿಡಿದ ಗೋವಿಂದಪುರ  ಪೊಲೀಸರು ಹಣದೊಂದಿಗೆ ನಾಲ್ವರು ಖದೀಮರನ್ನು ಬಂಧಿಸಿದ್ದು, ತನಿಖೆ ವೇಳೆ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾರೆ.

Leave a Comment

Your email address will not be published. Required fields are marked *