ಹರ್ಷ ಹತ್ಯೆ ಆರೋಪಿಗಳಿಗೆ ಜೈಲ್ ನಲ್ಲಿಯೂ ರಾಜಾತಿಥ್ಯ ಸಿಗುತ್ತಿದೆಯೇ..
ವಿಡಿಯೋ ಸ್ಕ್ರೀನ್ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಮಗ್ರ ನ್ಯೂಸ್ : ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿಗಳು ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Ad Widget ... ..

ಆದರೆ, ಅವರಿಗೆ ಜೈಲ್​ನಲ್ಲಿ​ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತಿದೆ. ಕಾರಣ ಆರೋಪಿಗಳ ಕೈಗೆ ಮೊಬೈಲ್​ ಸಿಕ್ಕಿದ್ದು, ಅವರು ವಿಡಿಯೋ ಕರೆ ಮಾಡಿರುವ ಸ್ಕ್ರೀನ್​ ರೆಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget

ಹರ್ಷ ಹತ್ಯೆಯಾದ ಬಳಿಕ ಇಡೀ ಶಿವಮೊಗ್ಗ ನಗರವೇ ಹೊತ್ತಿ ಉರಿದಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಹತ್ಯೆ ನಡೆದ ಒಂದು ದಿನದ ಒಳಗಾಗಿ ಹತ್ಯೆ ಆರೋಪಿಗಳನ್ನು ಬಂಧಿಸಿದರು.

ಹರ್ಷನ ಕೊಲೆ ಪ್ರಕರಣದ ಬಗ್ಗೆ ಎನ್​ಐಎ ತೀವ್ರವಾಗಿ ತನಿಖೆ ಮಾಡುತ್ತಿದೆ. ಈ ವೇಳೆ ಆರೋಪಿಗಳಿಗೆ ಮೊಬೈಲ್​ ಸಿಕ್ಕಿರುವುದಾದರೂ ಹೇಗೆ ಎಂಬ ಅನುಮಾನ ಹುಟ್ಟಿಕೊಂಡಿದೆ.

ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಮಾಡಿದ ಆರೋಪಿಗೆ ಜೈಲಿನಲ್ಲಿ ರಾಜಾತಿಥ್ಯ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಹರಿದಾಡುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಈ ಬಗ್ಗೆ ಜೈಲು ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ.

ಆದರೆ, ಎನ್​ಐಎ ತನಿಖೆ ನಡೆಸುವ ವೇಳೆಯಲ್ಲಿ ಆರೋಪಿಗಳ ಕೈಗೆ ಮೊಬೈಲ್ ಕೊಟ್ಟವರು ಯಾರು, ಈ ಆರೋಪಿಗಳು ತಮ್ಮ ಸಂಬಂಧಿಕರು ಮಾತ್ರವಲ್ಲದೇ ಬೇರೆಯವರೊಂದಿಗೆ ಮಾತನಾಡಿರುವ ಸಾಧ್ಯತೆಯೂ ಇದೆ.

ಜೊತೆಗೆ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆಯೇ ಎಂಬ ಅನುಮಾನವನ್ನು ಹರ್ಷ ಕುಟುಂಬದವರು ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *