ಬೆಳ್ತಂಗಡಿ: ಮಲಗಿದ್ದಲ್ಲಿಯೇ ಗಂಡನನ್ನು ಬರ್ಬರವಾಗಿ ಕೊಂದ ಹೆಂಡತಿ

ಸಮಗ್ರ ನ್ಯೂಸ್: ಮಲಗಿದ್ದ ಗಂಡನನ್ನು ಹೆಂಡತಿಯೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಬಂನ್ ಕರೆ ಎಂಬಲ್ಲಿ‌ ನಡೆದಿದೆ. ಬೇಬಿ ಅಲಿಯಾಸ್ ಪೊಟ್ಟಸ್ ಬೇಬಿ(55) ಕೊಲೆಯಾದ ವ್ಯಕ್ತಿ. ಹೆಂಡತಿ ನಲ್ಲಮ್ಮ(50) ಕೊಲೆ ಮಾಡಿದ ಹೆಂಡತಿ.

Ad Widget ... ..

ಕೊಲೆ‌ ಮಾಡಿದ ಬಳಿಕ ಆಕೆ ಕತ್ತಿ ಹಿಡಿದು ಹೆಣದ ಮುಂದೆ ಕುಳಿತಿದ್ದು ಇಂದು ಬೆಳಗ್ಗೆ ಕೊಲೆ ಘಟನೆ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.

Ad Widget

ದಂಪತಿಗೆ ಒಬ್ಬ ಪುತ್ರಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ ಮಗ ಉಪ್ಪಿನಂಗಡಿಯಲ್ಲಿ ಸ್ವಂತ ಉದ್ಯೋಗ ಮಾಡುತ್ತಿದ್ದು, ಇನ್ನೋರ್ವ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Leave a Comment

Your email address will not be published. Required fields are marked *