ಮಹಾರಾಷ್ಟ್ರದಲ್ಲಿ ಮಹಾಬಿಕ್ಕಟ್ಟು|ಪರಪುರುಷನ ಜೊತೆಗಿದ್ದ ಸಚಿವನ ‘ಪತ್ನಿ’ ಅರೆಸ್ಟ್!!

ಸಮಗ್ರ‌ ನ್ಯೂಸ್: ಒಂದೆಡೆ ಮಹಾರಾಷ್ಟ್ರ ಸರ್ಕಾರದ ಪತನದ ಅಂಚಿನಲ್ಲಿದ್ದರೆ, ಅದೇ ಇನ್ನೊಂದೆಡೆ ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆಯ ಸಚಿವ ಧನಂಜಯ್ ಮುಂಡೆ ನನ್ನ ಗಂಡ, ನಾನು ಆತನ ಎರಡನೆಯ ಹೆಂಡತಿ ಎಂದು ಭಾರಿ ಕೋಲಾಹಲ ಸೃಷ್ಟಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Ad Widget ... ..

ಕರುಣಾ ಶರ್ಮಾ (43) ಎಂಬ ಮಹಿಳೆ ಬಂಧನಕ್ಕೆ ಒಳಗಾಗಿದ್ದಾರೆ. ಈಕೆ ಈ ಹಿಂದೆ ಭಾರಿ ಸುದ್ದಿ ಮಾಡಿದ್ದರು. ತಾವು ಮುಂಡೆ ಅವರ ಎರಡನೆಯ ಪತ್ನಿ ಎಂದು ಹೇಳಿಕೊಂಡು ತೀವ್ರ ಗಲಾಟೆ ಸೃಷ್ಟಿಸಿದ್ದರು. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನೂ ಈಕೆ ನೀಡಿದ್ದರು. ಇದೀಗ ಈಕೆಯನ್ನು ಬೇರೊಂದು ಕೇಸ್​ನಲ್ಲಿ ಬಂಧಿಸಲಾಗಿದೆ. ಅದಕ್ಕೆ ಕಾರಣ, ಈಕೆ ಇನ್ನೊಬ್ಬಳ ಪತಿಯ ಜತೆ ಲಾಡ್ಜ್​ನಲ್ಲಿ ಸಿಕ್ಕಿಬಿದ್ದದ್ದೂ ಅಲ್ಲದೇ ಆ ವ್ಯಕ್ತಿಯ ಪತ್ನಿಗೆ ಜಾತಿ ನಿಂದನೆ ಮಾಡಿದ್ದು!

Ad Widget

23 ವರ್ಷದ ಗೃಹಿಣಿಯೊಬ್ಬಳು ಕರುಣಾ ಶರ್ಮಾ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ. ಈಕೆ ತನ್ನ ಗಂಡನ ಮೇಲೆ ಕಣ್ಣು ಹಾಕಿರುವುದಾಗಿ ಆಕೆ ಹೇಳಿದ್ದಾಳೆ. ‘ನಿನ್ನ ಗಂಡನನ್ನು ನಾನು ಮದುವೆಯಾಗುತ್ತಿದ್ದೇನೆ, ನೀನು ಆತನಿಗೆ ಡಿವೋರ್ಸ್​ ಕೊಡದೇ ಹೋದರೆ ಕೊಲೆ ಮಾಡುತ್ತೇನೆ ಎಂದು ಕರುಣಾ ಶರ್ಮಾ ಬೆದರಿಕೆ ಹಾಕಿದ್ದೂ ಅಲ್ಲದೇ ಹಾಕಿ ಸ್ಟಿಕ್​ನಿಂದ ಹಲ್ಲೆ ನಡೆಸಿದ್ದಾಳೆ’ ಎಂದು ಗೃಹಿಣಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇಷ್ಟೇ ಅಲ್ಲದೇ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಜಾತಿ ಆಧಾರದ ಮೇಲೆ ನಿಂದಿಸಿರುವುದಾಗಿ ಈಕೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

Leave a Comment

Your email address will not be published. Required fields are marked *