ಉಡುಪಿ: ಕಾಣೆಯಾಗಿದ್ದ ತೈಲ ಪ್ಯಾಕ್ಟರಿ ಮಾಲಕ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಕಳೆದೆರಡು ದಿನಗಳ ಹಿಂದೆ ಕಾಣೆಯಾಗಿದ್ದ ತೈಲ ಪ್ಯಾಕ್ಟರಿ ಮಾಲಕರೋರ್ವರು ಶವವಾಗಿ ಪತ್ತೆಯಾದ ಘಟನೆ ಉಡುಪಿ
ಜಿಲ್ಲೆಯ ಹಿರಿಯಡ್ಕದಿಂದ ವರದಿಯಾಗಿದೆ.

Ad Widget ... ..

ಮೃತಪಟ್ಟ ವ್ಯಕ್ತಿಯನ್ನು ಹಿರಿಯಡ್ಕ ಮಹಾಲಸಾ ಆಯಿಲ್ ಇಂಡಸ್ಟ್ರಿ ಮಾಲಕ ಪ್ರಕಾಶ್ ಪೈ ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಪ್ಯಾಕ್ಟರಿ ನಡೆಸುತ್ತಿದ್ದ ಇವರು ಜೂ.14 ರಿಂದ ಕಾಣೆಯಾಗಿದ್ದರು. ಗುರುವಾರ ಹಿರಿಯಡ್ಕದ ಕುಕ್ಕೆಹಳ್ಳಿ ಬಳಿ ಇವರ ಶವ ಪತ್ತೆಯಾಗಿದೆ.

Ad Widget

ಆರ್ಥಿಕ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರದಿ: ಸನತ್ ಹಿರಿಯಡ್ಕ

Leave a Comment

Your email address will not be published. Required fields are marked *