ಸಮಗ್ರ ನ್ಯೂಸ್: ಇಬ್ಬರು ದಲಿತ ಯುವಕರ ಕೊಲೆ ಮಾಸುವ ಮುನ್ನವೇ ಹಾಡಹಗಲೇ ದಲಿತ ಮುಖಂಡರೊಬ್ಬರನ್ನು ಗುಬ್ಬಿ ಪಟ್ಟಣದಲ್ಲಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು (ಬುಧವಾರ) ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ.
ಕೊಲೆಯಾದ ವ್ಯಕ್ತಿ ಗುಬ್ಬಿ ತಾಲೂಕು ದ.ಸಂ.ಸ. ಸಂಚಾಲಕ ನರಸಿಂಹಮೂರ್ತಿ(ಕುರಿಮೂರ್ತಿ) ಎಂದು ತಿಳಿದು ಬಂದಿದೆ.
ಗುಬ್ಬಿ ಪಟ್ಟಣದ ಬಿ.ಹಚ್.ರಸ್ತೆಯ ಟೀ ಅಂಗಡಿ ಮುಂದೆ ಕುಳಿತ್ತಿದ್ದ ನರಸಿಂಹಮೂರ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಗುಂಪು ಪರಾರಿಯಾಗಿದ್ದು, ಹಲ್ಲೆಯ ತೀವ್ರತೆಗೆ ನರಸಿಂಹಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರನ್ನು ಹತ್ಯೆ ಮಾಡಲಾಗಿತ್ತು.
ಗುರುಮೂರ್ತಿ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.