ಧರ್ಮಸ್ಥಳ: ರಸ್ತೆಗೆ ಬಿದ್ದಿದ್ದ ಮರಕ್ಕೆ ಬೈಕ್ ಢಿಕ್ಕಿ ಹೊಡೆದು ಉದ್ಯಮಿ ಸಾವು

ಸಮಗ್ರ ನ್ಯೂಸ್: ಧರ್ಮಸ್ಥಳದಿಂದ ನೇತ್ರಾವತಿ ಸ್ನಾನಘಟ್ಟ ಬರುವ ಹಾದಿಯಲ್ಲಿ ರಸ್ತೆಗೆ ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆದ ಬೈಕ್ ಸವಾರರೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ 5 ರ ಸುಮಾರಿಗೆ ನಡೆದಿದೆ. ಮೃತಪಟ್ಟವರನ್ನು 42 ವರ್ಷದ ಓಡಿಲ್ನಾಲ ಮುಗುಳಿಚತ್ರ ನಿವಾಸಿ ವಸಂತ್ ಕುಮಾರ್ ಜೈನ್ ಎಂದು ಗುರುತಿಸಲಾಗಿದೆ.

Ad Widget ... ..

ಇವರು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಸಮೀಪ ಹೋಟೆಲ್ ನಡೆಸುತ್ತಿದ್ದು ಧರ್ಮಸ್ಥಳದಲ್ಲಿ ವಾಸವಾಗಿದ್ದರು. ಮುಂಜಾನೆ ಧರ್ಮಸ್ಥಳ ಕಡೆಯಿಂದ ಸ್ನಾನಘಟ್ಟಕ್ಕೆ ಬರುವ ಮಾರ್ಗ ಮಧ್ಯ ರಸ್ತೆಗೆ ಬಿದ್ದಿದ್ದ ಮರವನ್ನು ಗಮನಿಸಿದೆ ಬೈಕ್ ಢಿಕ್ಕಿಯಾಗಿದೆ.

Ad Widget

ತಕ್ಷಣ ರಸ್ತೆಗೆ ಎಸೆಯಲ್ಪಟ್ಟ ಅವರು, ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸದೇ ಇರುವುದರಿಂದ ಅಪಘಾತ ತೀವ್ರತೆ ಹೆಚ್ಚಾಗಿದೆ. ತಕ್ಷಣ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಉಪನಿರೀಕ್ಷಕ ಓಡಿಯಪ್ಪ ಗೌಡ ಸಹಿತ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *