Ad Widget .

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ

ವಯಸ್ಸಾದಂತೆ ಜನರ ಲಿಂಗ ಬದಲಾಗುವ ಸ್ಥಳದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ! ಡೊಮಿನಿಕನ್ ರಿಪಬ್ಲಿಕ್ನಲ್ಲಿ ಹುಡುಗಿಯರು ಹುಡುಗರಾಗಿ ಬೆಳೆಯುವ ಗ್ರಾಮವೊಂದಿದೆ. ಲಾ ಸಲಿನಾಸ್ ಹೆಸರಿನ ಈ ಗ್ರಾಮವನ್ನು ಜನರು ಶಾಪಗ್ರಸ್ತ ಗ್ರಾಮವೆಂದು ಪರಿಗಣಿಸುತ್ತಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಲಾ ಸೆಲಿನಾಸ್ (La Salinas) ಹೆಸರಿನ ಈ ಗ್ರಾಮದ ಹುಡುಗಿಯರು ತನ್ನ ವಯಸ್ಸಿನ 12 ವರ್ಷಕ್ಕೆ ತಿರುಗುತ್ತಿದ್ದಂತೆ ಯುವಕರಾಗಿ ಪರಿವರ್ತನೆಯಾಗುತ್ತಾರಂತೆ. (Girls to turn into Boys). ಈ ಗ್ರಾಮದ ಜನಸಂಖ್ಯೆ ಕೇವಲ 6 ಸಾವಿರ ಮಾತ್ರ. ಆದರೂ ಕೂಡ ಈ ಚಿಕ್ಕ ಗ್ರಾಮ ತನ್ನೀ ವಿಶೇಷತೆಗಾಗಿ ವಿಶ್ವಾದ್ಯಂತದ ಸಂಶೋಧಕರಿಗೆ ಸಂಶೋಧನೆಯ ವಿಷಯವಾಗಿ ಮಾರ್ಪಟ್ಟಿದೆ. ಪ್ರಪಂಚದ ನಕಾಶೆಯಲ್ಲಿ ಈ ಊರಿನ ಗುರುತು ಒಂದು ನಿಗೂಢ ಗ್ರಾಮವಾಗಿ ಮಾರ್ಪಟ್ಟಿದೆ.
ಅಲ್ಲಿನ ಸ್ಥಳೀಯ ಜನರು ಹೇಳುವ ಪ್ರಕಾರ ಆ ಗ್ರಾಮದ ಮೇಲೆ ಒಂದು ಅದೃಷ್ಟ ಶಕ್ತಿಯ ನೆರಳು ಬಿದ್ದಿದೆ ಎನ್ನಲಾಗುತ್ತದೆ. ಇನ್ನೊಂದೆಡೆ ಆ ಗ್ರಾಮ ಶಾಪಗ್ರಸ್ತ ಗ್ರಾಮವಾಗಿದೆ ಎಂದು ಹೇಳುತ್ತಾರೆ. ಈ ಗ್ರಾಮದ ದೊಡ್ಡ ಸಮಸ್ಯೆ ಎಂದರೆ ಇಲ್ಲಿನ ಮಕ್ಕಳು ಹುಟ್ಟುವಾಗ ಹೆಣ್ಣು ಮಗುವಾಗಿ ಹುಟ್ಟುತ್ತಾರಂತೆ. ಆದರೆ, ಅವರು 12ನೆ ವಯಸ್ಸಿಗೆ ತಲುಪುತ್ತಿದ್ದಂತೆ ಅವರು ಗಂಡು ಮಗುವಾಗುತ್ತಾರಂತೆ.

Ad Widget . Ad Widget . Ad Widget .

ಈ ಮಕ್ಕಳಿಗೆ ಕಿನ್ನರರು ಎಂದು ಸಂಬೋಧಿಸುತ್ತಾರೆ. ಜನರು
ಲಿಂಗ ಬದಲಾಗುವ ಈ ಕಾಯಿಲೆಯಿಂದ ಗ್ರಾಮದ ಜನರು ತುಂಬಾ ಅಸಮಾಧಾನಗೊಂಡಿದ್ದಾರೆ. ಈ ಹಳ್ಳಿಯಲ್ಲಿ, ಯಾವುದೇ ಒಂದು ಕುಟುಂಬದಲ್ಲಿ ಹೆಣ್ಣು ಜನಿಸಿದಾಗಲೆಲ್ಲಾ ಕುಟುಂಬದಲ್ಲಿ ದುಃಖ ಆವರಿಸುತ್ತದೆ. ಯಾಕೆಂದರೆ ದೊಡ್ಡವರಾದ ಮೇಲೆ ಆ ಹುಡುಗಿ ಹುಡುಗನಾಗುತ್ತಾಳೆ ಎಂಬುದು ಅವರಿಗೆ ತಿಳಿದಿದೆ. ಇದರಿಂದಾಗಿ ಗ್ರಾಮದಲ್ಲಿ ಹುಡುಗಿಯರ ಸಂಖ್ಯೆಯೂ ಕಡಿಮೆಯಾಗಿದೆ. ರೋಗದಿಂದ ಬಳಲುತ್ತಿರುವ ಈ ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ಅಂತಹ ಮಕ್ಕಳನ್ನು ‘ಗ್ವೆಡೋಚೆ’ ಎಂದು ಕರೆಯಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ, ‘ಗ್ವೆಡೋಚೆ’ ಎಂಬ ಪದದ ಅರ್ಥ ಕಿನ್ನರ್. ವಾಸ್ತವವಾಗಿ, ಈ ರೋಗವು ಆನುವಂಶಿಕ ಕಾಯಿಲೆಯಾಗಿದ್ದು, ಇದರಿಂದ ಬಳಲುತ್ತಿರುವ ಮಕ್ಕಳನ್ನು ‘ಸುಡೋಹಾರ್ಮಾಫ್ರಾಡೈಟ್’ ಎಂದು ಕರೆಯಲಾಗುತ್ತದೆ.
ಒಂದು ವಿಶೇಷ ವಯಸ್ಸು ತಲುಪುತ್ತಿದ್ದಂತೆ ಅಂಗಗಳು ಕೂಡ ಹುಡುಗರ ಅಂಗಗಳಾಗುತ್ತವಂತೆ
ಹುಡುಗಿ ರೂಪದಲ್ಲಿ ಹುಟ್ಟಿರುವ ಕೆಲ ಮಕ್ಕಳ ಶರೀರ ಒಂದು ವಿಶೇಷ ವಯಸ್ಸು ತಲುಪುತ್ತಿದ್ದಂತೆ ಕ್ರಮೇಣ ಪುರುಷರ ಅಂಗವಾಗಿ ಮಾರ್ಪಡುತ್ತದೆ. ಅವರ ಧ್ವನಿ ಕೂಡ ಪುರುಷರ ಧ್ವನಿಯಾಗಿ ಮಾರ್ಪಡುತ್ತದೆ. ಅವರ ಶರೀರದಲ್ಲಿ ಎಲ್ಲ ಮಾರ್ಪಾಟುಗಳು ಹುಡುಗರನ್ನು ಹೋಲುತ್ತವಂತೆ. ಸಂಶೋಧಕರು ಗ್ರಾಮದ ಈ ವಿಚಿತ್ರ (Bizarre) ಕಾಯಿಲೆಯ ಕುರಿತು ಸಂಶೋಧನೆ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಇದುವರೆಗೂ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಈ ಗ್ರಾಮದ 90 ರಲ್ಲಿ ಓರ್ವ ಬಾಲಕಿ ಈ ಕಾಯಿಲೆಗೆ ತುತ್ತಾಗಿದ್ದಾಳಂತೆ.

Leave a Comment

Your email address will not be published. Required fields are marked *