ಟ್ರಾಫಿಕ್ ನಿಯಮ ಉಲ್ಲಂಘಿಸಿ ” ನಾನು ಎಂಎಲ್ಎ ಮಗಳು” ಎಂದು ದರ್ಪ ಮೆರೆದ ಅರವಿಂದ ಲಿಂಬಾವಳಿ ಪುತ್ರಿ

ಸಮಗ್ರ ನ್ಯೂಸ್: ಕಾರು ತಡೆದ ಒಂದೇ ಒಂದು ಕಾರಣಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಪೊಲೀಸರೊಂದಿಗೆ ವಾಗ್ವಾದಕ್ಕಿಳದ ಘಟನೆ ನಡೆದಿದೆ.

Ad Widget ... ..

ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಶಾಸಕರ ಪುತ್ರಿ ಸೀಟ್ ಬೆಲ್ಟ್ ಹಾಕಿರಲಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆ ಟ್ರಾಫಿಕ್ ಪೊಲೀಸರು ಲಿಂಬಾವಳಿ ಪುತ್ರಿ ಕಾರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಕಿರಿಕ್ ಮಾಡಿದ್ದು, ಮಾಧ್ಯಮದವರ ಮೇಲೂ ಚೀರಾಡಿದ್ದಾಳೆ.

Ad Widget

ಇದು ಎಂಎಲ್​ಎ ಗಾಡಿ, ಲಿಂಬಾವಳಿ ಕಾರು ಇದು ಗೊತ್ತಾ? ನಾನು ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಎಂದೆಲ್ಲಾ ಪೊಲೀಸರ ಮುಂದೆ ಏರುಧ್ವನಿಯಲ್ಲಿ ಚೀರಾಡಿದ್ದಾಳೆ. ಆದರೂ ಬಿಡದ ಪೊಲೀಸರು ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಈ ವೇಳೆ ವಿಧಿ ಇಲ್ಲದೆ ಲಿಂಬಾವಳಿ ಪುತ್ರಿಯೊಂದಿಗೆ ಕಾರಿನಲ್ಲಿದ್ದ ಯುವಕ ದಂಡ ವಿಧಿಸಿದ್ದಾನೆ. ಒಟ್ಟು 10 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

ಸಂಚಾರಿ ಪೊಲೀಸರ ಜೊತೆ ಲಿಂಬಾವಳಿ ಪುತ್ರಿ ಕಿರಿಕ್​ ಮಾಡಿದ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅರವಿಂದ ಲಿಂಬಾವಳಿ, ನನ್ನ ಮಗಳ ವರ್ತನೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ನನ್ನ ಮಗಳ ಸ್ನೇಹಿತ ತರುಣ್ ಕಾರನ್ನು ವೇಗವಾಗಿ ಓಡಿಸಿದ್ದಾನೆ. ಹೀಗಾಗಿ ಪೊಲೀಸರು ನನ್ನ ಪುತ್ರಿ ಸ್ನೇಹಿತ ತರುಣ್​ಗೆ ದಂಡ ವಿಧಿಸಿದ್ದಾರೆ. ಆತ ದಂಡ ಪಾವತಿಸಿದ್ದಾನೆ. ಇಂದಿನ ಘಟನೆಯಲ್ಲಿ ನನ್ನ ಮಗಳ ವರ್ತನೆಯಿಂದ ಮಾಧ್ಯಮ ಸ್ನೇಹಿತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Leave a Comment

Your email address will not be published. Required fields are marked *