ಯಶಪಾಲ್ ಸುವರ್ಣ, ಪ್ರಮೋದ್ ಮುತಾಲಿಕ್ ತಲೆ ತೆಗೆಯಲು 20 ಲಕ್ಷ ಆಫರ್ ನೀಡಿದ ಕಿಡಿಗೇಡಿಗಳು

ಸಮಗ್ರ‌ ನ್ಯೂಸ್: ಬಿಜೆಪಿ ರಾಷ್ಟ್ರೀಯ ಹಿಂದುಳಿದ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹಾಗೂ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಅವರನ್ನು ತಲೆ ಕಡಿದರೆ ಇಪ್ಪತ್ತು ಲಕ್ಷ ಬಹುಮಾನ ನೀಡುವುದಾಗಿ ಪೋಸ್ಟ್ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Ad Widget ... ..

ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬೆದರಿಕೆ ಹಾಕಲಾಗಿದೆ. ಯುವಕ ಮಂಗಳೂರು ಮಾರಿಗುಡಿ ಎಂದು ಪೇಜ್ ಮೇಲ್ಭಾಗದಲ್ಲಿ ಬರೆಯಲಾಗಿದ್ದು ಮಂಗಳೂರಿನ ಯುವಕರು ಈ ಪೇಜ್ ಹಿಂದಿರುವ ಶಂಕೆಯಿದೆ.

Ad Widget

ಯಶ್ ಪಾಲ್ ಸುವರ್ಣ ಮತ್ತು ಪ್ರಮೋದ್ ಮುತಾಲಿಕ್ ಹಿಜಾಬ್ ವಿಚಾರದಲ್ಲಿ ಉಗ್ರ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದರು. ಅಲ್ಲದೆ ಮುಸ್ಲಿಂ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹಿಂದುತ್ವದ ಪರವಾಗಿ ಖಡಕ್ ನಿಲುವುಗಳನ್ನು ಹೇಳುತ್ತಿದ್ದರು. ಇದೇ ಕಾರಣಕ್ಕೋ ಏನೋ ಕಿಡಿಗೇಡಿ ಯುವಕರು ಈ ರೀತಿ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬಹಿರಂಗ ಬೆದರಿಕೆ ಹಾಕಿರುವ ಬಗ್ಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *