ಸುಳ್ಯ: ಗೋದಾಮು‌ ಕಟ್ಟಡಕ್ಕೆ ಬೆಂಕಿ; ವೃದ್ಧ ಸಜೀವ ದಹನ; ಆತ್ಮಹತ್ಯೆ ಶಂಕೆ!?

ಸಮಗ್ರ ನ್ಯೂಸ್: ಗೋದಾಮು ಕಟ್ಟಡಕ್ಕೆ ಬೆಂಕಿ ತಗುಲಿದ ಪರಿಣಾಮ ವೃದ್ಧ ಕೃಷಿಕರೋರ್ವರು ಸಜೀವ ದಹನವಾದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಬಳಿಯ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ.

. Ad Widget . Ad Widget . Ad Widget .

ಗ್ರಾಮದ ನೂಜಾಲ ನಿವಾಸಿ ಮಹಾಲಿಂಗೇಶ್ವರ ಭಟ್ ಮೃತ ದುರ್ದೈವಿ. ಅಡಿಕೆ ಹಾಗೂ ಕೃಷಿ ಉತ್ಪನ್ನಗಳ ದಾಸ್ತಾನಿರಿಸಿದ್ದ ಕಟ್ಟಡಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಲಾಗುತ್ತಿದ್ದು, ವೃದ್ಧನ ಸಂಪೂರ್ಣ ಸುಟ್ಟ ಮೃತದೇಹ ಅವುಗಳೆಡೆ ಕಂಡುಬಂದಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಘಟನೆಯನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ತನಿಖೆ‌ ನಡೆಸಲಾಗುತ್ತಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *