ಸೇನಾ ವಾಹನ ಅಪಘಾತ| ಏಳು ಮಂದಿ ಯೋಧರು ಹುತಾತ್ಮ

ಸಮಗ್ರ ನ್ಯೂಸ್: ಸೇನಾ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಬಿದ್ದ ಪರಿಣಾಮ ಏಳು ಮಂದಿ ಯೋಧರು ಹುತಾತ್ಮರಾಗಿದ್ದು, ಹಲವಾರು ಸೈನಿಕರು ಗಾಯಗೊಂಡಿರುವ ಘಟನೆ ಶುಕ್ರವಾರ (ಮೇ 27) ಲಡಾಖ್ ನ ಟುರ್ ಟುಕ್ ಸೆಕ್ಟರ್ ನಲ್ಲಿ ನಡೆದಿದೆ.

Ad Widget ... ..

26 ಯೋಧರಿದ್ದ ಸೇನಾ ವಾಹನವು ಪರ್ತಾಪುರ್ ಟ್ರಾನ್ಸಿಟ್ ಶಿಬಿರದಿಂದ ಉಪ ಸೆಕ್ಟರ್ ಹನೀಫ್ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಉರುಳಿ ಬಿದ್ದಿದ್ದು, ಏಳು ಮಂದಿ ಹುತಾತ್ಮರಾಗಿದ್ದಾರೆ.

Ad Widget

ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *