ಚಿತ್ರೀಕರಣ ವೇಳೆ ಅಪಘಾತ| ನಟ ವಿಜಯ್ ದೇವರಕೊಂಡ, ನಟಿ ಸಮಂತಾ ಜಖಂ

ಸಮಗ್ರ ನ್ಯೂಸ್: ಚಿತ್ರೀಕರಣದ ಸಂದರ್ಭದಲ್ಲಿ ಅವಘಡ ಉಂಟಾಗಿ ಖ್ಯಾತ ನಟಿ ಸಮಂತಾ ರುತ್ ಪ್ರಭು ಹಾಗೂ ನಟ ವಿಜಯ್ ದೇವರಕೊಂಡ ಗಾಯಗೊಂಡಿದ್ದಾರೆ. ‘ಖುಷಿ’ ಸಿನಿಮಾ ಚಿತ್ರೀಕರಣ ಕಾಶ್ಮೀರದಲ್ಲಿ ಭರದಿಂದ ನಡೆಯುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಕಾರ್ ಪಲ್ಟಿಯಾಗಿದ್ದು ಕಾರ್ ನಲ್ಲಿದ್ದ ವಿಜಯ್ ದೇವರಕೊಂಡ ಮತ್ತು ಸಮಂತಾ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Ad Widget ... ..

ಕಾರ್ ಚೇಸಿಂಗ್ ಆಕ್ಷನ್ ದೃಶ್ಯದ ಚಿತ್ರೀಕರಣ ಜಮ್ಮು ಮತ್ತು ಕಾಶ್ಮೀರದ ಪಹಲ್ ಗಂನಲ್ಲಿ ನಡೆಯುವ ವೇಳೆ ನಿಯಂತ್ರಣ ತಪ್ಪಿದ ಕಾರ್ ಕೊಳಕ್ಕೆ ಬಿದ್ದಿದೆ. ಚಿತ್ರೀಕರಣದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದ ಕಾರಣ ಯಾವುದೇ ದೊಡ್ಡ ಮಟ್ಟದ ಅಪಾಯ ಉಂಟಾಗಿಲ್ಲ. ಕಾರ್ ನೀರಿಗೆ ಬಿದ್ದ ಕೂಡಲೇ ಇಬ್ಬರನ್ನು ರಕ್ಷಿಸಲಾಗಿದೆ.

Ad Widget

Leave a Comment

Your email address will not be published. Required fields are marked *