ರೈಲಿನಡಿಗೆ ಬಿದ್ದು ಎಂಬಿಬಿಎಸ್ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಯುವಕನೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ರಾಯಚೂರು ನಗರ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.ನಗರದ ಜಹೀರಾಬಾದ್ ನಿವಾಸಿ ವೆಂಕಟೇಶ್ ಮೃತ ಯುವಕ.

Ad Widget ... ..

ಬೆಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾಬ್ಯಾಸ ಮಾಡುತ್ತಿದ್ದ ವೆಂಕಟೇಶ್, ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸ್ತೆದಾರ್ ಸಂಪತ್‌ಕುಮಾರ್ ಎಂಬುವರ ಮಗನಾಗಿದ್ದ. ಅಕ್ಕನ ಮದುವೆಗೆಂದು ಗುರುವಾರ ರಾತ್ರಿ ಬೆಂಗಳೂರಿನಿಂದ ರೈಲಿನ ಮೂಲಕ ರಾಯಚೂರಿಗೆ ಬರುತ್ತಿದ್ದ.

Ad Widget

ರೈಲು ಬೆಳಗಿನ ಜಾವ 3ರಿಂದ 4 ಗಂಟೆಯ ಸುಮಾರಿಗೆ ರಾಯಚೂರು ನಗರಕ್ಕೆ ಬಂದಿದೆ. ಆದರೆ ನಿದ್ರೆಯಲ್ಲಿದ್ದ ಯುವಕನಿಗೆ ನಿಲ್ದಾಣ ಬಂದಿರುವುದು ಗೊತ್ತಾಗಿಲ್ಲ. ರೈಲು ಹೊರಡುವ ವೇಳೆ ವೆಂಕಟೇಶ್​ ಎಚ್ಚರಗೊಂಡಿದ್ದು, ರೈಲಿನಿಂದ ಇಳಿಯಲು ಯತ್ನಿಸಿ ಆಯತಪ್ಪಿ ಬಿದ್ದಿದ್ದಾನೆ. ಆಗ ರೈಲಿನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *