ಬೆಳ್ತಂಗಡಿ : ಬೈಕ್ ಸ್ಕಿಡ್ ಆಗಿ ಸವಾರ ಸಾವು; ಮತ್ತೊಬ್ಬ ಗಂಭೀರ

ಸಮಗ್ರ ನ್ಯೂಸ್: ಬೈಕ್ ಸ್ಕಿಡ್ ಆಗಿ ಫೋನ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ್ದು,ಸಹಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮುಂಡಾಜೆಯ ಶಾರದಾನಗರದಲ್ಲಿ ನಡೆದಿದೆ.

Ad Widget ... ..

ಸೋಮಂತಡ್ಕದಿಂದ ನಿನ್ನೆ ರಾತ್ರಿ ಹನ್ನೊಂದು ಗಂಟೆಗೆ ಗಾರೆ ಕೆಲಸ ಮುಗಿಸಿ ಕಡಿರುದ್ಯಾವರದ ಮನೆಗೆ ವಾಪಸ್ ಬೈಕ್ ಲ್ಲಿ ಬರುತ್ತಿದ್ದಾಗ ಮುಂಡಾಜೆ ಗ್ರಾಮದ ಶಾರದಾ ನಗರದ ಬಳಿ ಬೈಕ್ ಸ್ಕಿಡ್ ಆಗಿ ಫೋನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ದಾರಿಮಧ್ಯೆ ಸವಾರ ಸಾವನ್ನಪ್ಪಿದರು.

Ad Widget

ಕಡಿರುದ್ಯಾವರ ನಿವಾಸಿ ಯಶೋಧರ ದೇವಾಡಿಗ(30) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಹಸವಾರ ಕಡಿರುದ್ಯಾವರ ನಿವಾಸಿ ಅಶೋಕ್ ಗೌಡ(32)ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *