ಬೆಳ್ತಂಗಡಿ: ಭಗವಧ್ವಜ ಕಟ್ಟೆ ಹಾನಿಗೊಳಿಸಿದ ಕಿಡಿಗೇಡಿಗಳು

ಸಮಗ್ರ ನ್ಯೂಸ್: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಜಂಕ್ಷನ್ ನಲ್ಲಿರುವ ಭಗವಾಧ್ವಜ ಕಟ್ಟೆಯನ್ನು ಕಿಡಿಗೇಡಿಗಳು ಹೊಡೆದು ಹಾಕಿ, ಹಾನಿಗೊಳಿಸಿರುವ ಘಟನೆ ನಿನ್ನೆ ನಡೆದಿದೆ.

Ad Widget ... ..

ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ಪೋಸ್ಟ್ ನಿಂದಾಗಿ ಗಲಭೆ ಪ್ರಕರಣ ಮಾಸುವ ಮುನ್ನವೇ, ಮತ್ತೊಂದು ಗಲಭೆಗೆ ನಾಂದಿ ಹಾಡುವಂತೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ಉಪ್ಪಾರಪಳಿಕೆ ಜಂಕ್ಷನ್ ನಲ್ಲಿರುವಂತ ಭಗವಾಧ್ವಜ ಕಟ್ಟೆಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ.

Ad Widget

ನಿನ್ನೆಯ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿಡಿಗೇಡಿಗಳು ಕಟ್ಟೆಯನ್ನು ಹಾನಿ ಮಾಡಿ, ಭಗವಾಧ್ವಜವನ್ನು ಕೆಳಕ್ಕುರುಳಿಸಿದ್ದಾರೆ. ಇದೊಂದು ಉದ್ದೇಶಪೂರ್ವಕ ಕೃತ್ಯವೆಂದು ಆರೋಪಿಸಿರುವಂತ ಸ್ಥಳೀಯರು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *