ಸುಳ್ಯ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ| ಹೇಳದೆ ಕೇಳದೆ ಆಕೆ ಹೋಗಿದ್ದೆಲ್ಲಿಗೆ?

ಸಮಗ್ರ ನ್ಯೂಸ್: ಸುಳ್ಯದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget ... ..

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿರುವ ಡಾ. ಲೀಲಾಧರ್ ರವರು ದೂರು ನೀಡಿದ್ದು, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ದ್ವಿತೀಯ ಬಿಎಎಂಎಸ್‌ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಪ್ರದೇಶ ಮೂಲದ ಅಜ್ಮಘರ್ ನ ಕು|| ಮದೀಹಾ ಇಮ್ರಾನ್ (20 ವರ್ಷ) ಮಾ.20ರಂದು ರಾತ್ರಿ 8.00 ಗಂಟೆಗೆ ಹಾಜರಾತಿ ಪರಿಶೀಲನೆ ಸಮಯದಲ್ಲಿ ಗೈರು ಹಾಜರಾಗಿದ್ದು, ಈಕೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Ad Widget

ಈಕೆಯ ಹಿರಿಯ ಸಹೋದರ ಇದೇ ಸಂಸ್ಥೆಯಲ್ಲಿ ಮೂರನೇ ವರ್ಷದ ಬಿಎಎಂಎಸ್‌ ವ್ಯಾಸಂಗ ಮಾಡುತ್ತಿರುವ ಮಹಮ್ಮದ್ ಇಬ್ರಾನ್‌ನಲ್ಲಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಲಭಿಸಿಲ್ಲ.

ಸಂಸ್ದೆಯ ಸಿಸಿ ಟಿವಿಯಲ್ಲಿ ಪರಿಶೀಲಿಸಿದಾಗ ಮಾ. 20 ರಂದು ಅಪರಾಹ್ನ 2.30 ಗಂಟೆಗೆ ಹಾಸ್ಟೆಲ್‌ನಿಂದ ಬ್ಯಾಗ್ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *