ವಿಧಾನಸಭೆ ಅಧಿವೇಶನದಲ್ಲಿ ಸಚಿವರು ಗೈರು| ಯಡಿಯೂರಪ್ಪ ಬಿಟ್ರೆ ಇನ್ಯಾರಿಗೂ ಜವಾಬ್ದಾರಿ ಇಲ್ಲ – ಸಿದ್ದರಾಮಯ್ಯ

Ad Widget ... ..

ಸಮಗ್ರ ನ್ಯೂಸ್: ವಿಧಾನಸಭೆಯ ಕಲಾಪದ ಸಂದರ್ಭದಲ್ಲಿ ಸಚಿವರು ಗೈರಾಗಿರುವುದನ್ನ ಪ್ರಶ್ನಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಬಿಟ್ರೆ ಇನ್ಯಾರಿಗೂ ಜವಾಬ್ದಾರಿ ಇಲ್ಲ, ಅವರನ್ನೇ ಮುಂದೆ ಕೂಡಿಸಿ ಎಂದು ಹೇಳಿದ್ದಾರೆ.

Ad Widget

ಸಚಿವರ ಗೈರಿಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಸ್ಯರು ಚರ್ಚೆ ಮಾಡುವಾಗ ಸಚಿವರು ಬರಬೇಕು. ಸಚಿವರು ಇಲ್ಲದಿದ್ದರೆ ಬೇರೆ ಸಚಿವರು ಬರೆದುಕೊಳ್ಳಬೇಕು. ಇಲ್ಲದಿದ್ದರೆ ಸಚಿವರು ಹೇಗೆ ಉತ್ತರ ಕೊಡ್ತಾರೆ? ಎಂದು ಪ್ರಶ್ನಿಸಿದರು.

ಸದಸ್ಯರು ಮಾತಾಡೋದನ್ನು ಸಚಿವರು ಬರೆದುಕೊಂಡು ಉತ್ತರ ಕೊಡಬೇಕು. ಈ ವೇಳೆ ಯಡಿಯೂರಪ್ಪ ಹೊಗಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಮಾತ್ರ ಕಲಾಪದಲ್ಲಿ ಇರುತ್ತಾರೆ. ಯಡಿಯೂರಪ್ಪ ಅವರಿಗೆ ಇರುವ ಜವಾಬ್ದಾರಿ ಬೇರೆಯವರಿಗೆ ಇಲ್ಲ ಎಂದಿದ್ದು ಗಮನಸೆಳೆಯಿತು.

Leave a Comment

Your email address will not be published. Required fields are marked *