ಸಮಗ್ರ ನ್ಯೂಸ್: ಇಂದು ಬೆಳಿಗ್ಗೆಯಿಂದ ಮೇಕೆದಾಟು ನದಿ ನೀರಿಗಾಗಿ ಕಾಂಗ್ರೆಸ್ ಪಕ್ಷದಿಂದ 2ನೇ ಹಂತದ ಪಾದಯಾತ್ರೆಯನ್ನು ರಾಮನಗರದಿಂದ ಪುನರಾರಂಭಿಸಲಾಗುತ್ತಿದೆ. ಈ ಪಾದಯಾತ್ರೆಯ ಸಮಾರೋಪ ಸಮಾರಂಭದ ಬೃಹತ್ ಸಮಾರಂಭಕ್ಕೆ, ಬಿಬಿಎಂಪಿಯಿಂದ ಅನುಮತಿ ದೊರೆತಿದೆ.
ಮಾರ್ಚ್ 3ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಕೆದಾಟು ಪಾದಯಾತ್ರೆಯ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದಿಂದ ಬಿಬಿಎಂಪಿಗೆ ಅನುಮತಿಗಾಗಿ ಕೋರಲಾಗಿತ್ತು. ಇದೀಗ ಬಿಬಿಎಂಪಿ ಕೋವಿಡ್ ನಿಯಮಗಳನ್ನು ಪಾಲಿಸಿ, ಸಮಾವೇಶ ನಡೆಸೋದಕ್ಕೆ ಅನುಮತಿಸಿದೆ.
ನ್ಯಾಷನಲ್ ಕಾಲೇಜು ಮೈದಾನಕ್ಕೆ ಡಿ.ಕೆ. ಶಿವಕುಮಾರ್ ಮತ್ತಿತರ ಮುಖಂಡರ ಭೇಟಿ ನೀಡಿದ್ದಾರೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯ ಎರಡನೇ ಹಂತದ ಹೋರಾಟ ಇದೇ 27ರಂದು ರಾಮನಗರದಲ್ಲಿ ಆರಂಭವಾಗಿ ಮಾರ್ಚ್ 3ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದ ಮೂಲಕ ಮುಕ್ತಾಯಗೊಳ್ಳಲಿದೆ.