‘ಸರಿಗಮಪ ಚಾಂಪಿಯನ್ ಶಿಪ್’ | ಗ್ರಾಂಡ್ ಫಿನಾಲೆಯ ವಿನ್ನರ್ ಇವರೇ ನೋಡಿ

ಸಮಗ್ರ ನ್ಯೂಸ್: ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ಸರಿಗಮಪ ಚಾಂಪಿಯನ್ ಶಿಪ್’ ಸ್ವರಸಮರ ಗ್ರಾಂಡ್ ಫಿನಾಲೆಯಲ್ಲಿ ಗಾಯಕಿ ನಂದಿತಾ ತಂಡ ವಿನ್ನರ್ ಆಗಿದೆ.

Ad Widget ... ..

ಪ್ರಥಮ ಸ್ಥಾನ ಪಡೆದುಕೊಂಡ ನಂದಿತಾ ತಂಡದಲ್ಲಿ ಪೃಥ್ವಿ ಭಟ್, ರಜತ್ ಹೆಗಡೆ, ಸುಪ್ರಿಯಾ ಜೋಶಿ, ಕೀರ್ತನ್ ಹೊಳ್ಳ, ಚನ್ನಪ್ಪ, ಸುಹಾನಾ ಸೈಯದ್ ಅವರಿದ್ದರು.

Ad Widget

ಅನುರಾಧ ಭಟ್ ಅವರ ತಂಡ ಮೊದಲ ರನ್ನರ್ ಅಪ್ ಆಗಿದ್ದು, ಇಂದೂ ನಾಗರಾಜ್ ತಂಡ ಎರಡನೇ ರನ್ನರ್ ಅಪ್ ಆಗಿದೆ.

ಹೇಮಂತ್ ತಂಡದ ಕಂಬದ ರಂಗಯ್ಯ ಎಂಟರ್ ಟೈನರ್ ಆಫ್ ದಿ ಸೀಸನ್ ಆಗಿದ್ದಾರೆ. ಅನುರಾಧ ಭಟ್ ತಂಡದ ಶ್ರೀಹರ್ಷ ಬೆಸ್ಟ್ ಪರ್ ಫಾರ್ಮರ್ ಆಘ್ ದಿ ಸೀಸನ್ ಆಗಿದ್ದಾರೆ.

ಜಡ್ಜ್ ಗಳಾಗಿದ್ದ ಹಂಸಲೇಖ, ಅರ್ಜುನ್ ಜನ್ಯ, ವಿಜಯಪ್ರಕಾಶ್ ಅವರು ವಿಜೇತರಿಗೆ ಟ್ರೋಫಿ ನೀಡಿದ್ದಾರೆ.

Leave a Comment

Your email address will not be published. Required fields are marked *