ಸ್ವಂತ ಕಾರ್ಯಕರ್ತರ ರಕ್ಷಿಸದವರು ರಾಜ್ಯವನ್ನು ಹೇಗೆ ರಕ್ಷಿಸುವಿರಿ? | ಸರ್ಕಾರದ ವಿರುದ್ದ ಹೆಚ್.ಡಿ.ಕೆ ಕಿಡಿ

ಸಮಗ್ರ ನ್ಯೂಸ್ ಡೆಸ್ಕ್: ‘ನಿಮ್ಮ ಪಕ್ಷದ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಲ್ಲವೆಂದ್ರೆ ರಾಜ್ಯವನ್ನು ಹೇಗೆ ರಕ್ಷಣೆ ಮಾಡುತ್ತೀರಾ?’ ಎಂದು ಆಡಳಿತ ಪಕ್ಷ ಬಿಜೆಪಿ‌ ವಿರುದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Ad Widget ... ..

ಶಿವಮೊಗ್ಗದಲ್ಲಿ ನಡೆದಿರುವ ಹಿಂದುಪರ ಸಂಘಟನೆ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಎಚ್​ಡಿಕೆ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

Ad Widget

ಹತ್ಯೆಯಾದ ಯುವಕನ ಮನೆಗೆ ಎಲ್ಲಾ ರಾಜಕೀಯ ಪಕ್ಷದ ನಾಯಕರು ಭೇಟಿ ಕೊಡುತ್ತಾರೆ. ಮೊಸಳೆ ಕಣ್ಣೀರನ್ನೂ ಹಾಕುತ್ತಾರೆ. ಆ ಮೇಲೆ ಮನೆ ಬಳಿಯೇ ಸುಳಿಯುವುದಿಲ್ಲ. ಪ್ರಕರಣವನ್ನು ದುರುಪಯೋಗ ಪಡಿಸಿಕೊಂಡು ಅಶಾಂತಿ ಸೃಷ್ಟಿ ಮಾಡುತ್ತಾರೆ. ಕುಟುಂಬದವರು ಇದಕ್ಕೆ ಬಲಿಯಾಗಬಾರದು ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *