ಭೀಕರ ಅಪಘಾತಕ್ಕೆ ನಾಲ್ವರು ಸ್ಪಾಟೌಟ್| ಮದುವೆ ಮನೆಗೆ ಹೊರಟಿದ್ದವರ ಹೊತ್ತೊಯ್ದ ಜವರಾಯ

ಸಮಗ್ರ ನ್ಯೂಸ್ ಡೆಸ್ಕ್: ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ.

Ad Widget ... ..

ಅಪಘಾತದಲ್ಲಿ ಮೃತಪಟ್ಟವರು ಕುಂಭಂಪತಿ ಶ್ರೀನಿವಾಸ್ (48), ಸುಜಾತ (40), ರಮೇಶ್ (45) ಹಾಗೂ ಕಾರು ಚಾಲಕ ಚಂದ್ರುಪಟ್ಲ ಗ್ರಾಮದ ಕಲ್ಯಾಣ್ (26) ಎಂದು ಗುರುತಿಸಲಾಗಿದೆ.

Ad Widget

ಮೃತಪಟ್ಟವರು ಶ್ರೀನಿವಾಸ್ ಅವರ ಅಣ್ಣನ ಮಗನ ಮದುವೆಗೆಂದು ಮಹಬೂಬಾಬಾದ್ ಜಿಲ್ಲೆಯ ನೆಕ್ಕೊಂಡ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಕ್ರೇನ್ ಸಹಾಯದಿಂದ ಮೃತದೇಹಗಳನ್ನು ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *