“ಅತ್ಯಾಚಾರ” ನಡೆಸಿದವನ ಜೊತೆಗೇ ಪರಾರಿಯಾದ ಹಿಂದೂ ಯುವತಿ! ‘ಹಿಂದೂ ಧರ್ಮದಲ್ಲಿ ಹುಟ್ಟಬೇಡ’ ಎಂದು ಜಾಲತಾಣಗಳಲ್ಲಿ ಪೋಸ್ಟ್

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಹಿಂದೂ ಯುವತಿಯನ್ನು ಮೂಡಿಗೆರೆ ನಿವಾಸಿ ಅನ್ಯಧರ್ಮದ ಯುವಕನೋರ್ವ ಪುಸಲಾಯಿಸಿ, ಆಕೆಯು ಆತನೊಂದಿಗೆ ಓಡಿ ಹೋದ ಘಟನೆ ಬೆಳಕಿಗೆ ಬಂದಿದ್ದು, ವಿಚಾರ ಸುದ್ದಿಯಾಗುತ್ತಿದ್ದಂತೆ ಇಬ್ಬರ ಫೋಟೋ ಕೂಡಾ ಲವ್ ಜಿಹಾದ್ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

Ad Widget

ಅನ್ಯಧರ್ಮಕ್ಕೆ ಸೇರಿದ ಯುವಕ ಜುನೈದ್, ಈ ಮೊದಲು ಆಕೆಯನ್ನು ತಾನೊಬ್ಬ ಹಿಂದೂ ಎಂದು ನಂಬಿಸಿ ಪುಸಲಾಯಿಸಿದ್ದ. ಘಟನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿ ಯುವಕನ ಬಂಧನಕ್ಕೆ ಆಗ್ರಹಿಸಿ, ಮುಂದೆ ಹಿಂದೂ ಯುವತಿಯರು ಹಾಗೂ ಮಹಿಳೆಯರು ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕೆಂದು ಮನವಿ ಮಾಡಿದ್ದರು.

ಅದಲ್ಲದೇ ಯುವತಿಯು ಈ ಹಿಂದೆ ಅಂದರೆ 2021 ರಲ್ಲಿ ಜುನೈದ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಳು. ಆದರೆ ಕಳೆದ ಎರಡು ತಿಂಗಳ ಹಿಂದೆ ಜುನೈದ್ ಜೈಲಿನಿಂದ ಹೊರಬಂದಿದ್ದು, ತನ್ನ ಮೇಲೆ ಪ್ರಕರಣ ದಾಖಲಿಸಿದ್ದ ಯುವತಿಯೊಂದಿಗೆ ಪರಾರಿಯಾಗಿದ್ದಾನೆ.
ಸದ್ಯ ಪ್ರಕರಣದ ಸುತ್ತ ಹಲವು ಅನುಮಾನಗಳು ಎದ್ದಿವೆ.

ಈಕೆಯ ಈ ನಡೆಯ ಕುರಿತು ಕಿಡಿಕಾರಿರುವ ಹಿಂದೂ ಸಂಘಟನೆಯ ‌ಕೆಲ ಯುವಕರು ‘ಹಿಂದೂ ಧರ್ಮದಲ್ಲಿ ಹುಟ್ಟಬೇಡ, ಓಂ ಶಾಂತಿ’ ಎಂದು ಫೋಸ್ಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *