ಮಂಗಳೂರಿಗೆ ಹೋಗುವ ಪ್ರಯಾಣಿಕರ ಗಮನಕ್ಕೆ |ರಾಷ್ಟ್ರೀಯ ಹೆದ್ದಾರಿ ದುರಸ್ತಿ ಹಿನ್ನಲೆ ಪರ್ಯಾಯ ಮಾರ್ಗ ಬಳಸುವಂತೆ ಜಿಲ್ಲಾಧಿಕಾರಿ ಸೂಚನೆ| ರಸ್ತೆಗಳ ವಿವರಗಳಿಗೆ ನೋಡಿಕೊಳ್ಳಿ

Ad Widget ... ..

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-169 ಮಂಗಳೂರು-ಶೋಲಾಪುರ ರಸ್ತೆಯ ಮೂಡಬಿದ್ರೆ ಪುರಸಭೆ ವ್ಯಾಪ್ತಿಯ ಕಿ.ಮೀ.712.500 ಪ್ರವಾಹ ಹಾನಿ ದುರಸ್ತಿ ಯೋಜನೆಯಡಿ ಮೋರಿ ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಪ್ರಯುಕ್ತ ಇಂದಿನಿಂದ ಮಾರ್ಚ್ 3 ರವರೆಗೆ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ನಿರ್ಬಂಧಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

Ad Widget

ಪರ್ಯಾಯ ರಸ್ತೆಗಳ ವಿವರ:

ವೇಣೂರು ಹಾಗೂ ಬಂಟ್ವಾಳದಿಂದ ಕಾರ್ಕಳಕ್ಕೆ ಹೋಗುವ ವಾಹನಗಳು: ಹನುಮಾನ್ ದೇವಸ್ಥಾನ, ಸ್ವರಾಜ್ ಮೈದಾನ, ರಿಂಗ್ ರೋಡ್, ಅಲಂಗಾರು ಮೂಲಕ ಕಾರ್ಕಳ ತಲುಪಬಹುದು.

ಮಂಗಳೂರು ಹಾಗೂ ಮುಲ್ಕಿ, ಕಿನ್ನಿಗೋಳಿಯಿಂದ ಕಾರ್ಕಳಕ್ಕೆ ಹೋಗುವ ವಾಹನಗಳು: ಸ್ವರಾಜ್ ಮೈದಾನ, ರಿಂಗ್ ರೋಡ್, ಅಲಂಗಾರು ಮೂಲಕ ಕಾರ್ಕಳ ತಲುಪಬಹುದು.

ಮಂಗಳೂರಿನಿಂದ ಶಿರ್ತಾಡಿ-ಹೊಸ್ಮಾರ್ ಗೆ ಹೋಗುವ ವಾಹನಗಳು: ಸ್ವರಾಜ್ ಮೈದಾನ, ರಿಂಗ್ ರೋಡ್, ಅಲಂಗಾರು ಜೈನ್ ಪೇಟೆ ಮೂಲಕ ಶಿರ್ತಾಡಿ ಕಡೆಗೆ ಸಂಚರಿಸಬಹುದು.

ಹೊಸ್ಮಾರು, ಶಿರ್ತಾಡಿಯಿಂದ ಹೋಗುವ ವಾಹನಗಳು: ಮಂಗಳೂರಿಗೆ ಅಲಂಗಾರು, ರಿಂಗ್ ರೋಡ್, ಸ್ವರಾಜ್ ಮೈದಾನದ ಮೂಲಕ ಮಂಗಳೂರಿಗೆ ಸಂಚರಿಸಬಹುದು.

ಕಾರ್ಕಳದಿಂದ ಮಂಗಳೂರು, ಮುಲ್ಕಿ ಹಾಗೂ ಕಿನ್ನಿಗೋಳಿಗೆ ಹೋಗುವ ವಾಹನಗಳು: ಅಲಂಗಾರು- ರಿಂಗ್ ರೋಡ್-ಸ್ವರಾಜ್ ಮೈದಾನದ ಮೂಲಕ ಸಂಚರಿಸಬಹುದು.

Leave a Comment

Your email address will not be published. Required fields are marked *