ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಗುದ್ದಿದ ಲಾರಿ| ಗರ್ಭಿಣಿ ಮಹಿಳೆ ಸ್ಥಳದಲ್ಲೇ ಸಾವು

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಗರ್ಭಿಣಿ ಪತ್ನಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ, ಪತಿಯ ಕಣ್ಣೆದುರಿಗೆ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.

Ad Widget

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿಯ ಬಳಿಯಲ್ಲಿ ಬೈಕ್ ನಲ್ಲಿ ಗರ್ಭಿಣಿ ಪತ್ನಿ ಸಹನ ಹಾಗೂ ಪತಿ ಸಂದೀಪ್ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಲಾರಿಯೊಂದು ಹಿಂಬದಿಯಿಂದ ಡಿಕ್ಕಿಯಾಗಿದೆ. ಪರಿಣಾಮವಾಗಿ ಬೈಕ್ ನಲ್ಲಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಿದ್ದಾರೆ. ಆ ವೇಳೆ ಲಾರಿ ಸಹನ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕಣ್ಣೆದುರಲ್ಲೇ ನರಳಿ ಪ್ರಾಣಬಿಟ್ಟ ಪತ್ನಿಯ ಕಂಡು ಪತಿ ಕಣ್ಣೀರಿಡುತ್ತಿದ್ದ. ಸ್ಥಳಕ್ಕೆ ಧಾವಿಸಿದ ಕಿಕ್ಕೇರಿ ಪೊಲೀಸರು ತನಿಖೆ‌ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *