ಅಂಬ್ಯುಲೆನ್ಸ್ ಗೆ ದಾರಿ ಕೊಡದೆ ಹುಚ್ಚಾಟ ಮೆರೆದವನ ಬಂಧನ

Ad Widget ... ..

ಮಂಗಳೂರು: ಅಂಬ್ಯುಲೆನ್ಸ್ ಗೆ ದಾರಿ ಬಿಡದೆ ಸತಾಯಿಸಿ ಪುಂಡಾಟ ಮೆರೆದಿದ್ದ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ. ಮೋನಿಶ್ ಬಂಧಿತ ಕಾರು ಚಾಲಕನಾಗಿದ್ದು, ಬುಧವಾರ ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯೊಬ್ಬರನ್ನು ಆಯಂಬುಲೆನ್ಸ್​​​ನಲ್ಲಿ ಕೊಂಡೊಯ್ಯುತ್ತಿದ್ದಾಗ ಆರೋಪಿ ಮೋನಿಶ್ ಕಾರು ಅಡ್ಡಾದಿಡ್ಡಿ ಚಲಾಯಿಸಿ ದಾರಿ ಬಿಡದೆ ಸತಾಯಿಸಿದ್ದ.

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಉಡುಪಿಯವರೆಗೆ ಸುಮಾರು 40 ಕಿಲೋಮೀಟರ್ ಈತ ಅಂಬ್ಯುಲೆನ್ಸ್ ಗೆ ದಾರಿ ಬಿಟ್ಟಿರಲಿಲ್ಲ. KA19 Md 6843 ಎಂಬ ರಿಜಿಸ್ಟ್ರೇಷನ್ ನಂಬರ್​ನ ಕಾರಿನ ಚಾಲಕ ಈ ರೀತಿ ಸತಾಯಿಸಿದ್ದಾನೆ.

ಈ ಘಟನೆಯನ್ನು ಅಂಬ್ಯುಲೆನ್ಸ್ ನಲ್ಲಿದ್ದ ಸಿಬ್ಬಂದಿ ವಿಡಿಯೋ ಮಾಡಿದ್ದರು. ಇಷ್ಟು ಮಾತ್ರವಲ್ಲದೇ ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಅಂಬ್ಯುಲೆನ್ಸ್​​​ಗೂ ಈತ ದಾರಿ ಬಿಡದೆ ಸತಾಯಿಸಿದ್ದಾನೆ. ಈತನ‌ ದುರ್ವರ್ತನೆಯ ವಿಡಿಯೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರು ಚಾಲಕನನ್ನು ಪೊಲೀಸರು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *