SSLC ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ
ಫೆ. 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ನವದೆಹಲಿ: ಗಡಿ ಭದ್ರತಾ ಪಡೆ(Border Security Force)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಎಸ್ಎಫ್(BSF)ನಲ್ಲಿ 2788 ಕಾನ್ಸ್ಟೇಬಲ್(ಟ್ರೇಡ್ಸ್ಮ್ಯಾನ್) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ವಿದ್ಯಾರ್ಹತೆ:
ಗಡಿ ಭದ್ರತಾ ಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಕಾನ್ಸ್ಟೇಬಲ್(ಟ್ರೇಡ್ಸ್ಮ್ಯಾನ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ 10ನೇ ತರಗತಿ, ಐಟಿಐ, ಡಿಪ್ಲೋಮಾ ಪಾಸಾಗಿರಬೇಕು.
ವಯಸ್ಸಿನ ಮಿತಿ:
ಗಡಿ ಭದ್ರತಾ ಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಯ ವಯಸ್ಸು ಆಗಸ್ಟ್ 1, 2021ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಗಡಿ ಭದ್ರತಾ ಪಡೆಯ ನಿಯಮಗಳ ಪ್ರಕಾರ, ಆಯಾಯ ವರ್ಗಕ್ಕೆ ಅನುಸಾರವಾಗಿ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಗಡಿ ಭದ್ರತಾ ಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಕಾನ್ಸ್ಟೇಬಲ್(ಟ್ರೇಡ್ಸ್ಮ್ಯಾನ್) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 21,700-69,100 ವೇತನ ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/02/2022
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ:
ದೈಹಿಕ ಗುಣಮಟ್ಟ ಪರೀಕ್ಷೆ
ದೈಹಿಕ ದಕ್ಷತೆ ಪರೀಕ್ಷೆ
ಟ್ರೇಡ್ ಪರೀಕ್ಷೆ
ಲಿಖಿತ ಪರೀಕ್ಷೆ
ಸಂದರ್ಶನ