ಬೆಂಗಳೂರು: ಶಾಲೆಗಳಿಗೆ ಮತ್ತೆ ರಜೆ ವಿಸ್ತರಣೆ| ಜ.31ರವರೆಗೂ ತರಗತಿ ತೆರೆಯಲು ನಿರ್ಬಂಧ

ಬೆಂಗಳೂರು: ಈಗಾಗಲೇ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ 1 ರಿಂದ 9ನೇ ತರಗತಿವರೆಗೆ ಬೆಂಗಳೂರಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಆದೇಶವನ್ನು ಈಗ ಜನವರಿ 31ರವರೆಗೆ ವಿಸ್ತರಿಸಿರುವುದಾಗಿ ಶಿಕ್ಷಣ ಸಚಿವರು ಘೋಷಿಸಿದ್ದಾರೆ.

Ad Widget ... ..

ಈ ಕುರಿತಂತೆ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನವರಿ 31 ರವರೆಗೆ 1 ರಿಂದ 9ನೇ ತರಗತಿಗಳಿಗೆ ರಜೆ ವಿಸ್ತರಿಸಿರುವುದಾಗಿ ತಿಳಿಸಿದರು.

Ad Widget

ಕೋವಿಡ್ ನಿಯಂತ್ರಣ ಕ್ರಮಗಳೊಂದಿಗೆ 10, 11 ಮತ್ತು 12ನೇ ತರಗತಿಗಳು ನಡೆಯಲಿವೆ. ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು, ಮುಂದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬೆಂಗಳೂರು ಬಿಟ್ಟರೆ ಮೈಸೂರು, ಬೆಳಗಾವಿಯಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ಹೆಚ್ಚಿವೆ ಎಂದರು.

Leave a Comment

Your email address will not be published. Required fields are marked *