ಪೊಲೀಸ್ ಪೇದೆಗೆ ದಂಡ ಹಾಕಿದ ಎಎಸ್ಐ| ಕಾರಣವೇನು ಗೊತ್ತಾ?

Ad Widget ... ..

ತುಮಕೂರು: ಕಾನೂನು ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕಾದ ಪೊಲೀಸರೇ ನಿಯಮಗಳನ್ನು ಗಾಳಿಗೆ ತೂರುವುದು ಸಾರ್ವಜನಿಕವಾಗಿ ಚರ್ಚೆಯ ವಿಷಯ. ಆದರೆ ತಪ್ಪು ಮಾಡಿದ ಪೊಲೀಸರ ಮೇಲೆ ಹಿರಿಯ ಅಧಿಕಾರಿಗಳು ದಂಡ ವಿಧಿಸಿದ ಘಟನೆಯೊಂದು ನಡೆದಿದೆ.

Ad Widget

ಇಂತಹದ್ದೊಂದು ಘಟನೆ ತುಮಕೂರಿನಲ್ಲಿ ನಡೆದಿದ್ದು, ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಎಎಸ್ ಐ ರಸ್ತೆಯಲ್ಲೇ ಅಡ್ಡ ಹಾಕಿ ದಂಡ ವಿಧಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತುಮಕೂರು ಪೊಲೀಸ್ ಕಾನ್ಸ್‌ಟೇಬಲ್ ಗೆ ಟ್ರಾಫಿಕ್ ಎಎಸ್ ಐ ಧರ್ಮೇಗೌಡ 500 ರೂ. ದಂಡ ವಿಧಿಸಿದ್ದಾರೆ.

ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ಈ ಘಟನೆ ನಡೆದಿದ್ದು, ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ಪೊಲೀಸ್ ಪೇದೆಗಳು ಮುಜುಗರಕ್ಕೆ ಒಳಗಾಗಿದ್ದಾರೆ. ಎಎಸ್ ಐ ಧರ್ಮೇಗೌಡ ಅವರ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *