ಬೆಂಗಳೂರು: ಮೂರನೇ ಅಲೆ ಬರೋದು ನಿಶ್ಚಿತ ಎಂಬ ವಾತಾವರಣವಿದೆ. ಬೆಂಗಳೂರನ್ನು ರೆಡ್ ಝೋನ್ ಅಂತ ಕೇಂದ್ರ ಗುರುತಿಸಿದೆ. ಜನವರಿ 7ಕ್ಕೂ ಮುನ್ನ ಒಂದು ಸಭೆ ಮಾಡ್ತೇವೆ. ಈ ಸಭೆಯಲ್ಲಿ ಹೊಸ ಟಫ್ ರೂಲ್ಸ್ ತರುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಗಲೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರು ರೆಡ್ ಝೋನ್ನಲ್ಲಿದೆ. ಮುಂದಿನ ವಾರದಲ್ಲಿ ಕೋವಿಡ್ ಟಪ್ ರೂಲ್ಸ್ ಬಗ್ಗೆ ಮಹತ್ವದ ಸಭೆ ನಡೆಯಲಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ.
ನಂತರ ಬೆಂಗಳೂರಿನಲ್ಲಿ ಕೋವಿಡ್ಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿ ತರುತ್ತೇವೆ. ತಜ್ಞರು ಮಾಡುವ ಶಿಫಾರಸುಗಳನ್ನು ಯಥಾವತ್ ಜಾರಿ ಮಾಡ್ತೇವೆ ಎಂದಿದ್ದಾರೆ