ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕವು ಜಗತ್ತನ್ನು ಕಂಗೆಡಿಸಿದೆ. ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಹೊಸ ರೂಪಾಂತರಿಗಳು ಪ್ರತ್ಯಕ್ಷವಾಗುತ್ತಿವೆ. 2022ರ ವರ್ಷ ಹೇಗಿರಬಹುದು? ಯಾವ ರಾಶಿಯವರಿಗೆ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮೇಷರಾಶಿ: ಈ ರಾಶಿಯವರಿಗೆ ಈ ವರ್ಷ ಶುಭ ಸುದ್ದಿಗಳು ಸಿಗಲಿದ್ದು, ಸ್ವಲ್ಪ ಹೆಚ್ಚಿನ ಪ್ರಯತ್ನ ಹಾಕುವ ಅವಶ್ಯಕತೆ ಇದೆ. ಕೆಲವೊಂದು ಗೊಂದಲದ ಸಮಯದಲ್ಲಿ ಕುಟುಂಬದ ಸದಸ್ಯರ ಸಲಹೆ ಕೇಳುವುದು ಬಹಳ ಮುಖ್ಯ. ಅವರ ಅನುಭವ ಮತ್ತು ಸಲಹೆ ನಿಮ್ಮ ಕಷ್ಟಗಳನ್ನು ದೂರ ಮಾಡುತ್ತದೆ. ನಿಮ್ಮ ಆಸೆ ಈ ವರ್ಷ ನೆರವೇರಲಿದೆ. ವಿದೇಶ ಪ್ರಯಾಣದ ಕನಸು ನನಸಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಕುಟುಂಬದ ಸದಸ್ಯರ ಮೇಲೆ ನೀವು ಹೊಂದಿರುವ ಪ್ರೀತಿಯು ಹೆಚ್ಚಲಿದೆ. ಈ ವರ್ಷದಲ್ಲಿ ನೀವು ದೇವಸ್ಥಾನಗಳಿಗೆ ಭೇಟಿ ನೀಡುವುದಕ್ಕಾಗಿ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಹೀಗೆ ಮಾಡುವುದರಿಂದ ನಿಮಗೆ ಶಾಂತಿ ಸಿಗುತ್ತದೆ. ವೃತ್ತಿಯ ವಿಚಾರದಲ್ಲಿ ಈ ವರ್ಷವು ನಿಮಗೆ ಶುಭವಾಗಿರಲಿದೆ.
ವೃಷಭ ರಾಶಿ: ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗುವ ವರ್ಷ. ಈ ವರ್ಷ ಹಲವಾರು ಕನಸುಗಳು ನನಸಾಗಲಿದೆ. ಬದುಕಿನಲ್ಲಿ ಪ್ರಗತಿ ಉಂಟಾಗಲಿದ್ದು, ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ವ್ಯವಹಾರವು ನಿಧಾನಗತಿಯಲ್ಲಿ ಮುಂದುವರೆಯುತ್ತದೆ, ಆದರೆ ಆದಾಯದಲ್ಲಿ ಹೆಚ್ಚಳವಾಗಲಿದೆ. ನಿಮ್ಮ ಜವಾಬ್ದಾರಿಯನ್ನು ನೀವು ಅರಿತುಕೊಳ್ಳಲಿದ್ದೀರಿ ಹಾಗೂ ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಉಂಟಾಗಲಿದೆ. ಈ ವರ್ಷದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ನಿಮ್ಮ ಆಹಾರಕ್ರಮದ ಕುರಿತು ನೀವು ಎಚ್ಚರಿಕೆಬೇಕು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಮೇ ತಿಂಗಳ ನಂತರ ನಿಮ್ಮ ವೃತ್ತಿ ಜೀವನದಲ್ಲಿ ನಿಮಗೆ ಸಾಕಷ್ಟು ಗೌರವ ದೊರೆಯಲಿದೆ.
ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಈ ವರ್ಷ ಶುಭಕರವಾಗಿರಲಿದೆ. ನಿಮ್ಮ ಕಠಿಣ ಶ್ರಮ ಹಾಗೂ ಏಕಾಗ್ರತೆಯಿಂದ ಯಶಸ್ಸು ಲಭಿಸಲಿದೆ. ನಿಮ್ಮ ಜೊತೆ ಕೆಲಸ ಮಾಡುವ ಜನರ ಮೇಲೆ ನೀವು ನಂಬಿಕೆ ಇಡಬೇಕು. ಈ ವರ್ಷವು ನಿಮಗೆ ಪ್ರಯಾಣದ ಅನೇಕ ಅವಕಾಶಗಳು ಸಿಗಲಿದೆ. ಏಪ್ರಿಲ್ ನಂತರ ಶನಿಯ ಸಂಕ್ರಮಣವು ನಿಮಗೆ ಒಂದಷ್ಟು ಸಮಸ್ಯೆ ಉಂಟು ಮಾಡಲಿದೆ. ಎಷ್ಟು ಕಠಿಣವಾಗಿ ದುಡಿದರೂ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ನೀವು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು. ಏಪ್ರಿಲ್ನಿಂದ ಡಿಸೆಂಬರ್ ತನಕ ನಿಮ್ಮ ವೃತ್ತಿಯಲ್ಲಿ ಗುರು ಬಲ ದೊರಕಲಿದೆ.
ಕರ್ಕಾಟಕ: ಜಾತಕದ ಪ್ರಕಾರ ಈ ರಾಶಿಯವರಿಗೆ ವರ್ಷದ ಆರಂಭವು ಆದಾಯ ಮತ್ತು ಲಾಭಗಳನ್ನು ತರಲಿದೆ. ಇದು ನಿಮ್ಮ ಚಿಂತನಾ ಶೈಲಿಯನ್ನು ಬದಲಾಯಿಸಲಿದೆ. ನಿಮ್ಮ ವಿಚಾರಗಳು ಬದಲಾಗಲಿವೆ. ನೀವು ಬದುಕನ್ನು ವಿಶಾಲ ದೃಷ್ಟಿಕೋನದಿಂದ ನೋಡಲಿದ್ದೀರಿ. ಬದುಕಿನಲ್ಲಿ ಯಾವ ಸರಿ ತಪ್ಪುಗಳನ್ನು ಕಂಡುಕೊಳ್ಳಲಿದ್ದು, ಹೊಸ ದಾರಿ ಲಭಿಸಲಿದೆ. ಅನೇಕ ಕ್ಷೇತ್ರಗಳಲ್ಲಿ ಅತ್ಯಂತ ಶುಭ ಸುದ್ದಿಯನ್ನು ತಂದುಕೊಡಲಿದೆ. ವ್ಯವಹಾರದಲ್ಲಿ ನೀವು ಸಾಕಷ್ಟು ಪ್ರಗತಿ ಸಾಧಿಸಲಿದ್ದೀರಿ. ನೀವು ಊಹಿಸದ ಕ್ಷೇತ್ರದಲ್ಲಿಯೂ ಉತ್ತಮ ಲಾಭ ಸಿಗಲಿದೆ.
ಸಿಂಹ ರಾಶಿ: ಏಪ್ರಿಲ್ ನಂತರ ಉಂಟಾಗುವ ಗುರುವಿನ ಸಂಕ್ರಮಣವು ಉದ್ಯೋಗದಲ್ಲಿರುವವರಿಗೆ ಶುಭ ಸಮಯವನ್ನು ತಂದು ಕೊಡಲಿದೆ. ಈ ವರ್ಷದಲ್ಲಿ ನೀವು ಜ್ಯೋತಿಷ್ಯ ಶಾಸ್ತ್ರ ಅಥವಾ ಪುರಾತತ್ವಕ್ಕೆ ಸಂಬಂಧಿಸಿದ ವಿಷಯದಲ್ಲಿ ಆಸಕ್ತಿ ತೋರಲಿದ್ದೀರಿ. ಅಧ್ಯಾತ್ಮಿಕ ವಿಚಾರಗಳಲ್ಲಿ ನೀವು ಭಾಗವಹಿಸಲಿದ್ದೀರಿ. ಆದರೆ, ಈ ವರ್ಷದಲ್ಲಿ ಶನಿಯು ನಿಮ್ಮ ಜಾತಕದಲ್ಲಿ ಏಳನೇ ಮನೆಗೆ ಬರುವುದರಿಂದ ಈ ವರ್ಷದಲ್ಲಿ ನಿಮ್ಮ ವ್ಯವಹಾರ ಪಾಲುದಾರ ಮತ್ತು ನಿಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಇದೇ ವೇಳೆ ಜೀವನ ಸಂಗಾತಿಯ ಜೊತೆಗೂ ಒಂದಷ್ಟು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಸಾಧಿಸಬಹುದು. ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಬದುಕಿನಲ್ಲಿ ಬದಲಾವಣೆಗಳಾಗುತ್ತದೆ.
ಕನ್ಯಾ ರಾಶಿ: ಈ ರಾಶಿಯವರು ವಿದೇಶಕ್ಕೆ ಹೋಗಲು ಬಯಸಿದರೆ ಫೆಬ್ರುವರಿಯಲ್ಲಿ ಮತ್ತು ಮೇ ಮತ್ತು ಜೂನ್ ನಡುವೆ ಇಂತಹ ಅವಕಾಶ ಸಿಗಬಹುದು. ಮುಖ್ಯವಾಗಿ ಫೆಬ್ರುವರಿ ತಿಂಗಳಿನಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಇದರ ನಂತರ ಜುಲೈ ಮತ್ತು ಆಗಸ್ಟ್ ನಡುವೆ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯವು ತುಂಬಾ ಚೆನ್ನಾಗಿರಲಿದೆ. ಸಾಮಾನ್ಯ ಕೌಟುಂಬಿಕ ಜೀವನದತ್ತ ನಾವು ಗಮನ ಹರಿಸುವುದಾದರೆ, ಇಲ್ಲೂ ಪ್ರೀತಿ ಮತ್ತು ಆತ್ಮೀಯತೆ ನೆಲೆಸಲಿದೆ. ನೀವು ಅವಿವಾಹಿತರಾಗಿದ್ದರೆ ಈ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೀರಿ.
ತುಲಾ ರಾಶಿ: ಹಿರಿಯರ ಮಾತನ್ನು ಪಾಲಿಸಬೇಕು. ಜೂನ್ ಮತ್ತು ಜುಲೈಯಲ್ಲಿ ನಿಮ್ಮ ಬುದ್ಧಿ ವೇಗವಾಗಿ ಕೆಲಸ ಮಾಡಲಿದೆ. ಇದರಿಂದಾಗಿ ಅತ್ಯಂತ ಕಷ್ಟದ ಕೆಲಸವನ್ನು ಸುಲಭವಾಗಿ ನೀವು ಬಗೆಹರಿಯಲಿದ್ದೀರಿ. ಇದು ವೃತ್ತಿ ಜೀವನದಲ್ಲಿ ಹಲವಾರು ಬದಲಾವಣೆ ತರಲಿದೆ. ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆಯೂ ಇದೆ. ಬದುಕಿನ ಪರಿಸ್ಥಿತಿಯನ್ನು ನೋಡಿಕೊಂಡು ನೀವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಈ ಸ್ವಭಾವವು ನಿಮಗೆ ಈ ವರ್ಷದಲ್ಲಿ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ನಿಮ್ಮ ಹಣಕಾಸಿನ ಸ್ಥಿತಿಯ ಕುರಿತು ನೀವು ಕಾಳಜಿ ವಹಿಸಬೇಕು
ವೃಶ್ಚಿಕ ರಾಶಿ: ನಿಮಗೆ ಈ ವರ್ಷ ಹೆಚ್ಚು ಶುಭವಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವರ್ಷವು ಅನುಕೂಲಕರ. ಏಪ್ರಿಲ್ ನಂತರ ಉಂಟಾಗುವ ಗುರುವಿನ ಸಂಕ್ರಮಣವು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳು ಉತ್ತಮ ಕಾಲೇಜಿಗೆ ಪ್ರವೇಶ ಪಡೆಯಲಿದ್ದಾರೆ. ಈ ವರ್ಷದಲ್ಲಿ ನೀವು ಹಣಕಾಸಿನ ಕುರಿತು ಚಿಂತಿಸುವ ಅಗತ್ಯವಿಲ್ಲ. ರಿಯಾದ ಅವಕಾಶವನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಲು ಮರೆಯಬೇಡಿ. ಈ ಮೂಲಕ ನೀವು ಪ್ರಗತಿ ಸಾಧಿಸಬಹುದು. ಮಿತ್ರರು ಮತ್ತು ಸಂಬಂಧಿಗಳ ಜೊತೆಗಿನ ಸಂಬಂಧವು ಚೆನ್ನಾಗಿರಲಿದ್ದು ನಿಮ್ಮ ಮಿತ್ರರು ನಿಮ್ಮ ಕೆಲಸದಲ್ಲಿ ನಿಮಗೆ ಸಹಕರಿಸಲಿದ್ದಾರೆ
ಧನು ರಾಶಿ: ಈ ರಾಶಿಯಲ್ಲಿ ರಾಹುವು ಏಳನೇ ಮನೆಗೆ ಪ್ರವೇಶಿಸುವುದರಿಂದ ಕೌಟುಂಬಿಕ ಜೀವನದಲ್ಲಿ ಒತ್ತಡ ಉಂಟಾಗಬಹುದು. ಈ ವರ್ಷವು ಪ್ರಯಾಣಿಸುವುದಕ್ಕೆ ಅನುಕೂಲಕರ. ವರ್ಷದ ಆರಂಭದಲ್ಲಿ ಮತ್ತು ವರ್ಷದ ನಡುವೆ ಮೇ ಮತ್ತು ಜುಲೈ ನಡುವೆ ಪ್ರಯಾಣಿಸಿದರೆ ನಿಮ್ಮ ಪಾಲಿಗೆ ಹೆಚ್ಚು ಪ್ರಯೋಜನಕಾರಿ. ಮೇ ಮತ್ತು ಅಕ್ಟೋಬರ್ ನಡುವೆ ನಿಮ್ಮ ತಾಯಿ ಮತ್ತು ತಂದೆಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ. ಕೇತುವು ಈ ವರ್ಷದಲ್ಲಿ ನಿಮ್ಮ ರಾಶಿಚಕ್ರದಿಂದ ಹೊರಹೋಗಲಿದ್ದಾನೆ. ನಿಮ್ಮನ್ನು ಕೆಲ ಕಾಲದಿಂದ ಕಾಡುತ್ತಿದ್ದ ಮಾನಸಿಕ ಸಮಸ್ಯೆಗಳು ಈಗ ದೂರವಾಗಲಿವೆ. ನಿಮ್ಮ ಒಡಹುಟ್ಟಿದವರ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ. ಮೆಲ್ಲನೆ ಭಿನ್ನಾಭಿಪ್ರಾಯಗಳು ದೂರಗೊಳ್ಳಲಿವೆ.
ಮಕರ ರಾಶಿ: ವಿದ್ಯಾರ್ಥಿಗಳು ಯಶಸ್ಸು ಪಡೆಯಬೇಕಾದರೆ ಕಠಿಣ ಶ್ರಮ ಪಡುವ ಅಗತ್ಯವಿದೆ. ಈ ವರ್ಷದಲ್ಲಿ ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ನಿಮ್ಮ ವರ್ತನೆಯ ಮೇಲೆ ಒಂದಷ್ಟು ನಿಗಾ ವಹಿಸುವ ಅಗತ್ಯವಿದೆ. ನಿಮಗೆ ಮಕ್ಕಳ ಕುರಿತ ಕಳವಳ ಕಾಡಬಹುದು. ಆದಾಯವು ಕಡಿಮೆ ಇದ್ದು ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ದೀರ್ಘ ಕಾಲದಿಂದ ನೀವು ಪೂರ್ಣಗೊಳಿಸಲು ಇಚ್ಛಿಸುತ್ತಿದ್ದ ಹಾಗೂ ಬಾಕಿ ಇರುವ ಕೆಲಸವು ಪೂರ್ಣಗೊಳ್ಳಲಿದೆ. ಹಣಕಾಸಿನ ವಿಚಾರದಲ್ಲಿಯೂ ಈ ವರ್ಷವು ನಿಮಗೆ ಲಾಭದಾಯಕ ಎನಿಸಲಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ನೀವು ಯತ್ನಿಸಬೇಕು. ಕಾನೂನಿನ ವಿಚಾರಗಳಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ.
ಕುಂಭರಾಶಿ: ವರ್ಷದಲ್ಲಿ ನಿಮ್ಮ ತಾಯಿ ಮತ್ತು ತಂದೆಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ. ವರ್ಷದ ಮಧ್ಯ ಭಾಗದಲ್ಲಿ, ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಂಡು ಬರುವ ಸಾಧ್ಯತೆ ಇರುವುದರಿಂದ ನೀವು ಈ ಕುರಿತು ಒಂದಷ್ಟು ಗಮನ ನೀಡಬೇಕಾದೀತು. ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಈ ವರ್ಷದ ಮಧ್ಯ ಭಾಗದಲ್ಲಿ ನಿಮ್ಮ ಗೆಳೆಯರಿಂದ ಸಾಕಷ್ಟು ಬೆಂಬಲವನ್ನು ಪಡೆಯಲಿದ್ದೀರಿ. ಈ ಕಾರಣದಿಂದಾಗಿ ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಸಾಕಷ್ಟು ಗಂಭೀರವಾಗಿ ಕೆಲಸ ಮಾಡಬೇಕು.
ಮೀನರಾಶಿ: ಸೃಜನಶೀಲತೆ ಮತ್ತು ನಿಮ್ಮನ್ನು ಕಲಾವಿದನನ್ನಾಗಿಸಿದ ನಿಮ್ಮ ಕೌಶಲ್ಯಗಳಿಗೆ ಈ ಅತ್ಯುತ್ತಮ ವರ್ಷವಾಗಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಸದೃಢರಾಗಿರುವಿರಿ. ಅನ್ವೇಷಣಾ ಮಟ್ಟ ಮತ್ತು ಚೌಕಟ್ಟಿಗೂ ಮೀರಿದ ಅರ್ಹತೆ ಅಗತ್ಯವಿರುವ ಕಾರ್ಯಗಳಲ್ಲಿ ನೀವು ಯಶಸ್ಸು ಕಾಣಲಿದ್ದೀರಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಅವಸರ ಮಾಡಬೇಡಿ. . ನಿಮಗೆ ಹಣ ಕೊಡಲು ಬಾಕಿ ಇಟ್ಟವರು ಏಪ್ರಿಲ್ ನಂತರ ಅದನ್ನು ಮರಳಿಸಲಿದ್ದಾರೆ.







